Advertisement
ಏನಿದು ಗೋಲ್ಡನ್ ರಥಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆ ಆರಂಭವಾದದ್ದು 2008ರಲ್ಲಿ. ಕರ್ನಾಟಕ ರಾಜ್ಯ ಸರಕಾರ ಹಾಗೂ ರೈಲ್ವೇ ಸಚಿವಾಲಯದ ಸಹಯೋಗದಲ್ಲಿ ಇದು ಆಗಿತ್ತು. ರೈಲಿನಲ್ಲಿ 18 ಬೋಗಿಗಳು ಮತ್ತು 44 ಅತಿಥಿ ಕೋಣೆಗಳಿರುತ್ತವೆ. ಒಟ್ಟು 84 ಪ್ರಯಾಣಿಕರ ಸಾಮರ್ಥ್ಯ. ಪ್ರತಿ ಕ್ಯಾಬಿನ್‌ನಲ್ಲೂ ಆಧುನಿಕ ಸೌಲಭ್ಯ, ಸುಸಜ್ಜಿತ ಪೀಠೊಪಕರಣ, ಐಷಾರಾಮಿ ಕೊಠಡಿ ಮತ್ತು ಸ್ನಾನಗೃಹಗಳು, ಹೊಸ ಲಿನಿನ್ ಮತ್ತು ಕಟ್ಲರಿಗಳನ್ನು ಅಳವಡಿಸಲಾಗಿದೆ. ಸ್ಟ್ರೀಮಿಂಗ್ ಸೌಲಭ್ಯಕ್ಕಾಗಿ ವೈ-ಫೈ ಹೊಂದಿರುವ ಸ್ಮಾರ್ಟ್ ಟಿವಿ ಇದೆ. ಇಷ್ಟಲ್ಲದೆ ಸಿಸಿಟಿವಿಗಳು ಮತ್ತು ಅಗ್ನಿಶಾಮಕ ಮುನ್ನೆಚ್ಚರಿಕೆಗಳನ್ನು ಸಹ ರೈಲಿನಲ್ಲಿ ನವೀಕರಿಸಲಾಗಿದೆ.