Advertisement
ಅಷ್ಟಕ್ಕೂ ಇವೆಲ್ಲವೂ ಹಣ ಇರುವಲ್ಲೇ ಸಾಧ್ಯ ಅನ್ನೋದು ಕಟು ಸತ್ಯ. ಹಾಗಂತ ಮತ್ಯಾರಿಂದಲೂ ಸಾಧ್ಯವೇ ಇಲ್ಲ ಎಂದು ವಾದಿಸಲೂ ಸಾಧ್ಯವಾಗದು. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಯ ಬೆನ್ನೇರಿದ ಅನೇಕ ಬಡವರೂ ಬೆವರಿಳಿಸಿ, ಕೈತುಂಬ ಗಳಿಸಿಯೇ ದುಬಾರಿ ಕಾರು, ಬೈಕ್‌ಗಳ ಒಡೆಯರಾಗಿರುವುದಕ್ಕೆ ನೂರಾರು ಉದಾಹರಣೆಗಳು ಸಿಗುತ್ತವೆ. ಒಂದಂತೂ ಖರೆ, “ಲಕ್ಸುರಿ’ ಲೈಫ್ಗೆ ಆಕರ್ಷಿತರಾಗದಿರುವವರು ಕಡಿಮೆ. ಹೆಚ್ಚಿನವರು ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಲಕ್ಸುರಿತನದ ಅನುಭವ ಬಯಸುತ್ತಾರೆ.
1974ರಲ್ಲೇ ಹೋಂಡಾ ಲಕ್ಸುರಿ ವಿನ್ಯಾಸದಲ್ಲಿ ಈ ಹೆಸರಿನ ಬೈಕ್ ತಯಾರಿಸಿತ್ತು. ಆನಂತರದ ದಿನಗಳಲ್ಲಿ ಅಮೆರಿಕ, ಯುರೋಪ್, ಆಸ್ಟ್ರೇಲಿಯಾಗಳ ಜನಪ್ರಿಯ ಬೈಕ್‌ಗಳಲ್ಲಿ ಇದೂ ಒಂದಾಗಿತ್ತು. ಜಪಾನ್‌ನಲ್ಲೂ ಈ ಬೈಕ್‌ನ ಬಗ್ಗೆ ಭಾರೀ ಕ್ರೇಜ್ ಸೃಷ್ಟಿಯಾಗಿತ್ತು. ಈಗ ಭಾರತ ಕೂಡ ಇದರಿಂದ ಹೊರತಾಗಿಲ್ಲ. ಗುಣಮಟ್ಟದ ಎಂಜಿನ್ ಬಳಕೆ
“ಕಾಸಿಗೆ ತಕ್ಕ ಕಜ್ಜಾಯ’ ಎನ್ನುವಂತೆ 2018ರ ಸಾಲಿನಲ್ಲಿ ಪರಿಚಯಿಸಲಾಗಿರುವ ಗೋಲ್ಡ್ ವಿಂಗ್‌ನಲ್ಲಿ ಎಂಜಿನ್‌ನ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ. 1833 ಸಿಸಿ, 125 ಬಿಎಚ್‌ಪಿ ಮತ್ತು 170ಎನ್‌ಎಂ ಟಾರ್ಕ್ ಸಾಮರ್ಥ್ಯದ 6 ಸಿಲಿಂಡರ್ ಎಂಜಿನ್ ಬಳಸಿಕೊಳ್ಳಲಾಗಿದ್ದು, ಯಾವುದೇ ಪ್ರಕಾರದ ರಸ್ತೆಯಲ್ಲೂ ಸಲೀಸಾಗಿ ಮುನ್ನುಗ್ಗುವ ಶಕ್ತಿ ಹೊಂದಿದೆ. ಹೈಡ್ರೋಲಿಕ್ ಕ್ಲಚ್ ವ್ಯವಸ್ಥೆಯೊಂದಿಗೆ 7ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.
Related Articles
ಅಂದಹಾಗೆ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಬಳಸಿಕೊಳ್ಳಲಾಗಿದೆ. ಎಬಿಎಸ್ ವ್ಯವಸ್ಥೆಯ 3ಪಿಸ್ಟನ್ ಕ್ಯಾಲಿಪರ್ ಹೈಡ್ರೋಲಿಕ್ ಡಿಸ್ಕ್ ಬ್ರೇಕ್ ಅನ್ನು ಮುಂಭಾಗದಲ್ಲಿಯೂ, ಎಬಿಎಸ್ ವ್ಯವಸ್ಥೆಯ 3ಪಿಸ್ಟನ್ ಕ್ಯಾಲಿಪರ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಅನ್ನು ಹಿಂಭಾಗದಲ್ಲಿ ಬಳಸಿಕೊಳ್ಳಲಾಗಿದೆ.
Advertisement
ವೇರಿಯಂಟ್ಎಸ್ಟಿಡಿ ಮತ್ತು ಟೂರ್ ಹೆಸರಿನ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಟೂರ್ ಹೆಸರಿನ ವೇರಿಯಂಟ್‌ನ ಎಕ್ಸ್ ಶೋ ರೂಂ ಬೆಲೆ 30 ಲಕ್ಷ ರೂ. ಆಗಲಿದೆ. ಎಕ್ಸ್ ಶೋರೂಂ ಬೆಲೆ 28.45 ಲಕ್ಷ ರೂ. ನಿಂದ – ಕರ್ಬ್ ಭಾರ 364 ಕಿಲೋಗ್ರಾಂ
– ಉದ್ದ 2475 ಮಿ.ಮೀ/905ಮಿ.ಮೀ ಅಗಲ/1340ಮಿ.ಮೀ ಎತ್ತರ
– 130ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್
– ವೀಲ್ ಅಳತೆ 18 ಇಂಚು
– ಇಂಧನ ಶೇಖರಣಾ ಸಾಮರ್ಥ್ಯ 21.1 ಲೀಟರ್ – ಗಣಪತಿ ಅಗ್ನಿಹೋತ್ರಿ