Advertisement

ಚಿನ್ನದ ಟಾಯ್ಲೆಟ್‌ ಆಫ‌ರ್‌

09:22 AM Jan 27, 2018 | |

ವಾಷಿಂಗ್ಟನ್‌: ತಮ್ಮ ತವರೂರಾದ ನ್ಯೂಯಾರ್ಕ್‌ನ ಮ್ಯೂಸಿಯಂ ಒಂದರಿಂದ ಹಳೇ ಕಲಾಕೃತಿ ಕೊಳ್ಳಲು ಹೋದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಖಭಂಗ ಅನುಭವಿಸಿದ್ದಾರೆ. 

Advertisement

ಗುಗೆನಿಮ್‌ ಮ್ಯೂಸಿಯಂನಲ್ಲಿರುವ, 19ನೇ ಶತಮಾನದ ಡಚ್‌ ಕಲಾವಿದ ವಿನ್ಸೆಂಟ್‌ ವ್ಯಾನ್‌ ಗೋಘ…, ಹಿಮವನ್ನು ಬಳಸಿ ರಚಿಸಿರುವ ವಿಶೇಷ ಕಲಾಕೃತಿ ಕೊಳ್ಳಲು ಬಯಸಿದ್ದ ಟ್ರಂಪ್‌, ಮ್ಯೂಸಿಯಂ ಕ್ಯುರೇಟರ್‌ ನ್ಯಾನ್ಸಿ ಸ್ಪೆಕ್ಟರ್‌ಗೆ ಪತ್ರ ಬರೆದಿದ್ದರು.  ಈ ಬೇಡಿಕೆಗೆ, ನ್ಯಾನ್ಸಿ ಸ್ಪೆಕ್ಟರ್‌ ಪ್ರತಿಕ್ರಿಯಿಸಿ, “”ನಿಯಮಗಳ ಪ್ರಕಾರ, ಕಲಾಕೃತಿ ಸಾಗಾಣಿಕೆ ಮಾಡುವ ಹಾಗಿಲ್ಲ. ಅದರ ಬದಲಿಗೆ ಮ್ಯೂಸಿಯಂನಲ್ಲೇ ಇರುವ, ಇತ್ತೀಚೆಗೆ ಜನಾಕರ್ಷಣೆ ಕಳೆದುಕೊಂಡಿರುವ 18 ಕ್ಯಾರೆಟ್‌ನ ಚಿನ್ನದ ಟಾಯ್ಲೆಟ್‌ ನೀಡಲು ಸಿದ್ಧ” ಎಂದಿದ್ದಾರೆ ಎಂದು “ವಾಷಿಂಗ್ಟನ್‌ ಪೋಸ್ಟ್‌’ ಹೇಳಿದೆ. 

ಇದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ ತಮ್ಮ ಆಫ‌ರ್‌ ಸಮರ್ಥಿಸಿಕೊಂಡಿರುವ ನ್ಯಾನ್ಸಿ, “”200 ಡಾಲರ್‌ ಮೊತ್ತದ ಊಟ ಮಾಡಲಿ, 2 ಡಾಲರ್‌ ಮೊತ್ತದ ಊಟ ಮಾಡಲಿ, ಅದರ ಮಜಾ ಅಂತ್ಯವಾಗುವುದು ಟಾಯ್ಲೆಟ್‌ನಲ್ಲೇ ತಾನೇ? ಹಾಗಾಗಿ, ಟಾಯ್ಲೆಟ್‌ ಮಾನವರಿಗೆ ಅತಿ ಮುಖ್ಯ. ಹಾಗಾಗಿಯೇ ಅದರ ಆಫ‌ರ್‌ ನೀಡಿದ್ದೆ” ಎಂದು ಸಮರ್ಥಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next