ಬೆಂಗಳೂರು: ಪಾಲಿಶ್ ಹಾಗೂ ಹರಳುಗಳನ್ನು ಕೂರಿಸುವ ನೆಪದಲ್ಲಿ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಒಂದೂವರೆ ಕೆ.ಜಿ.ಚಿನ್ನಾಭರಣಗಳನ್ನು ಕೊಂಡೊಯ್ದು ಪರಾರಿಯಾಗಿದ್ದ ಅಕ್ಕಸಾಲಿಗನನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಅಂಕುರ್ ಕುಮಾರ್ ಡಂಗರವಾಲ್ (32) ಬಂಧಿತ. ಆರೋಪಿಯಿಂದ 38 ಲಕ್ಷ ರೂ. ಮೌಲ್ಯದ 384 ಗ್ರಾಂ ಚಿನ್ನದ ಗಟ್ಟಿ ಹಾಗೂ 10.99 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿ ಸುಮಾರು ಐದಾರು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ನಗರತ್‌ಪೇಟೆ ಯಲ್ಲೇ ವಾಸವಾಗಿದ್ದು, ಅಕ್ಕಸಾಲಿಗನಾಗಿ ಕೆಲಸ ಮಾಡಿಕೊಂಡಿದ್ದ. ಪರಿಚಯಸ್ಥ ಜ್ಯುವೆಲ್ಲರಿ ಅಂಗಡಿಗಳಿಂದ ಚಿನ್ನಾಭರಣಗಳನ್ನು ತಂದು ಪಾಲಿಶ್ ಹಾಗೂ ಹರಳುಗಳನ್ನು ಕೂರಿಸಿ ವಾಪಸ್ ಕೊಡುತ್ತಿದ್ದ. ಈ ಮಧ್ಯೆ ನಗರತ್‌ಪೇಟೆಯ ಚಿನ್ನಾಭರಣ ಅಂಗಡಿ ಮಾಲಿಕರೊಬ್ಬರಿಂದ ಮೇ ತಿಂಗಳಿನಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ 1 ಕೆ.ಜಿ. 277ಗ್ರಾಂ ಚಿನ್ನಾ ಭರಣಗಳನ್ನು ಒಂದು ತಿಂಗಳಲ್ಲೇ ಪಾಲಿಶ್ ಮತು ಹರಳುಗಳನ್ನು ಕೂರಿಸಿ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದು, ಆಗಸ್ಟ್ ಆದರೂ ವಾಪಸ್ ನೀಡಿಲ್ಲ. ಅದರಿಂದ ಅನುಮಾನಗೊಂಡ ಮಾಲಿಕರು, ಆರೋ ಪಿಗೆ ಕರೆ ಮಾಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀ ಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ದಾಗ ಆರೋಪಿ ರಾಜ ಸ್ಥಾನ ಬಿಲ್ವಾರ್ ಜಿಲ್ಲೆಯ ಕಲಿ ಯಾಸ್ ಗ್ರಾಮದ ತನ್ನ ಮನೆಯಲ್ಲಿರುವುದು ಖಾತ್ರಿ ಯಾಗಿ, ಅಲ್ಲಿಗೆ ಹೋಗಿ ಬಂಧಿಸಲಾಗಿದೆ ಎಂದರು.
ಜ್ಯುವೆಲ್ಲರಿ ಅಂಗಡಿಗಳಿಗೆ ಮಾರಾಟ: ದೋಚಿದ್ದ ಒಂದೂವರೆ ಕೆ.ಜಿ. ಚಿನ್ನಾಭರಣಗಳನ್ನು ಆರೋಪಿ ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಡಿಸಿ ಬೆಂಗಳೂರಿನ ವಿವಿಧ ಜ್ಯುವೆಲ್ಲರಿ ಅಂಗಡಿಗಳಿಗೆ ಮಾರಾಟ ಮಾಡಿ, ಹಣ ಪಡೆಯದೆ ರಸೀದಿ ಪಡೆದುಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಸದ್ಯ ಈ ಜ್ಯುವೆಲ್ಲರಿ ಅಂಗಡಿಗಳಿಂದ 384 ಗ್ರಾಂ ಚಿನ್ನಾಭರಣ ಮತ್ತು ಕೆಲ ಜ್ಯುವೆಲ್ಲರಿ ಮಾಲಿಕರಿಂದ 10.99 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಚಿನ್ನ ಮಾರಾಟ ಮಾಡಿ ಪ್ರೇಯಸಿ ಜತೆಗೆ ಸುತ್ತಾಟ: ಆರೋಪಿ ಅಂಕುರ್ ಕುಮಾರ್ ಡಂಗರವಾಲ್, ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇನ್ನು ದೋಚಿದ್ದ ಚಿನ್ನಾಭರಣ ಕರಗಿಸಿ ಅವುಗಳನ್ನು ಕೆಲ ಜ್ಯೂವೆಲ್ಲರಿ ಮಾಲಿಕರಿಗೆ ಮಾರಾಟ ಮಾಡಿ ಲಕ್ಷಾಂತರ ರೂ. ಪಡೆದುಕೊಂಡಿದ್ದ ಆರೋಪಿ, ಪ್ರೇಯಸಿ ಜತೆ ಮುಂಬೈ, ಗೋವಾ, ರಾಜಸ್ಥಾನ ಸೇರಿ ದೇಶದ ಕೆಲ ಪ್ರವಾಸಿ ತಾಣಗಳಿಗೆ ವಿಮಾನದಲ್ಲೇ ಪ್ರಯಾಣಿಸಿ ಮೋಜು-ಮಸ್ತಿ ಮಾಡಿದ್ದಾನೆ. ತಿಂಗಳು ಗಟ್ಟಲೇ ಆಕೆ ಜತೆ ವಿವಿಧ ರಾಜ್ಯಗಳನ್ನು ಸುತ್ತಾಡಿ ಹಣ ಪೋಲು ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.