ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ರಮ ಚಿನ್ನವನ್ನು ಸಾಗಿಸುತ್ತಿದ್ದ ಕೇರಳದ ಮೂಲದ ವ್ಯಕ್ತಿಯನ್ನು ಬಂಧಿಸಿದ್ದು, 33 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಕೇರಳದ ಕೊಪ್ಪ ನಿವಾಸಿ 45 ವರ್ಷದ ಕೊಪ್ಪ ಮಮ್ಮಿನಿ ಖಲೀದ್ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಎಥೆನಾಲ್ ಕುಡಿಸಿ, ಗಾಡಿ ಓಡಿಸಿ! ಪೆಟ್ರೋಲ್, ಡೀಸೆಲ್ ಬೇಡಿಕೆ ಕುಗ್ಗಿಸಲು ಮುಂದಾದ ಕೇಂದ್ರ
ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಬಂದ ಈತ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಒಳ ಉಡುಪಿನಲ್ಲಿ ಈತ 737 ಗ್ರಾಮ್ ಚಿನ್ನವನ್ನು ಸಾಗಾಟ ಮಾಡುತ್ತಿದ್ದ.
ಇದನ್ನೂ ಓದಿ: ನಂದಿಗ್ರಾಮದ ಚರಿತ್ರೆಗಿಂತ ಮೊದಲು ನಂದಿ ಇತಿಹಾಸ!
ಕಸ್ಟಮ್ಸ್ ಅಧಿಕಾರಿಗಳಾದ ಅವಿನಾಶ್ ಕಿರಣ್ ರೊಂಗಾಲಿ, ಭೋಂಕಾರ್, ರಾಕೇಶ್ ಕುಮಾರ್, ವಿಕ್ರಮ್ ಚಕ್ರವರ್ತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.