ವಿಜಯಪುರ: ಗೂರ್ಖಾನ ಸಮಯ ಪ್ರಜ್ಞೆಯಿಂದ, ಚಿನ್ನದ ಅಂಗಡಿ ದರೋಡೆ ನಡೆಸುವ ಯತ್ನ ತಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ಪಟ್ಟಣದ ಹಳೇ ಕೋರ್ಟ್ ಬಳಿಯ ಇಲ್ಲೂರ ಜ್ಯವೆಲ್ಲರಿ ಶಾಪ್ ನ ಶಟರ್ ಅನ್ನು, ಗ್ಯಾಸ್ ಕಟರ್ ಮೂಲಕ ಕತ್ತರಿಸಿ ದರೋಡೆಕೋರರು ಒಳ ಒಳನುಗ್ಗಿದ್ದರು. ಮಾತ್ರವಲ್ಲದೆ ಚಿನ್ನದ ಅಂಗಡಿ ಹೊರಗೂ ಕೆಲ ಕಳ್ಳರು ಕಾವಲಿಗಾಗಿ ನಿಂತಿದ್ದರು. ಈ ವೇಳೆ ಇವರ ಚಲನವಲನದಿಂದ ಸಂಶಯಗೊಂಡ ಗೂರ್ಖಾ ಶೇರ್ ಬಹಾದ್ದೂರ ಥಾಪಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆದರೇ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿರುವ ಸುಳಿವು ಅರಿತ ದರೋಡೆಕೋರರು ಕೂಡಲೇ ಪರಾರಿಯಾಗಿದ್ದಾರೆ. ಗೂರ್ಖಾನ ಸಮಯ ಪ್ರಜ್ಞೆ, ಪೊಲೀಸರ ತ್ವರಿತ ಸ್ಪಂದನೆಯಿಂದಾಗಿ ಭಾರೀ ಪ್ರಮಾಣದಲ್ಲಿ ನಡೆಯಬಹುದಾಗಿದ್ದ ಚಿನ್ನದ ಅಂಗಡಿ ಕಳ್ಳತನ ತಪ್ಪಿದೆ.
ಇದನ್ನೂ ಓದಿ: ಪುಲ್ವಾಮಾ ದಾಳಿ ಕುರಿತಂತೆ ಕಾಂಗ್ರೆಸ್ ಪಕ್ಷ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು: ಜಾವ್ಡೇಕರ್
ಚಿನ್ನದ ಅಂಗಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದವರ ಚಹರೆ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ