Advertisement

ಚಿನ್ನ ಧಾರಣೆ ದಾಖಲೆ

02:48 AM Aug 07, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಅನಿಶ್ಚಿತತೆ ನಡುವೆ ಹಳದಿ ಲೋಹದ ಧಾರಣೆ ಏರಿಕೆಗೆ ಪೂರ್ಣವಿರಾಮ ಸದ್ಯಕ್ಕಂತೂ ಸಿಗುವ ಸಾಧ್ಯತೆಯಿಲ್ಲ.

Advertisement

ರಾಜಧಾನಿಯಲ್ಲಿ ಚಿನ್ನದ ಧಾರಣೆಯು ಗುರುವಾರ 10 ಗ್ರಾಂಗಳಿಗೆ 225 ರೂ. ಏರಿಕೆ ಕಂಡು 56,590 ರೂ. ಮುಟ್ಟಿದ್ದು, ದಾಖಲೆ ನಿರ್ಮಿಸಿದೆ.

ಬೆಳ್ಳಿ ಧಾರಣೆಯೂ ಕಿಲೋಗ್ರಾಂಗೆ 1,932 ರೂ. ಏರಿಕೆ ಕಂಡು 75,755 ರೂ. ತಲುಪಿದೆ. ಬುಧವಾರ ಇದು ಕಿಲೋಗ್ರಾಂಗೆ 73,823 ರೂ.ಗಳಲ್ಲಿತ್ತು. ಚಿನ್ನವು 10 ಗ್ರಾಂಗೆ 56,365 ರೂ.ಗಳಲ್ಲಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯತ್ತ ಹೆಚ್ಚು ಒಲವು ತೋರುತ್ತಿರುವುದು ಈ ಸತತ ಧಾರಣೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next