ನವದೆಹಲಿ: ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಸನ್ನಿಹಿತವಾಗಿರುವ ನಡುವೆಯೇ ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ ಕಾಣುವ ಮೂಲಕ ಖರೀದಿದಾರರಿಗೆ ಬಿಸಿ ಮುಟ್ಟಿಸಿದೆ.
ಇದನ್ನೂ ಓದಿ:Electoral Bonds: 1600 ಕೋಟಿ ರೂ. ಯಾರಿಂದ ವಸೂಲಿ ಮಾಡಿದ್ದು? ರಾಹುಲ್ ಗೆ ಶಾ ತಿರುಗೇಟು
ಗುರುವಾರ(ಮಾರ್ಚ್ 21)ದ ಮಾರುಕಟ್ಟೆ ಧಾರಣೆ ಪ್ರಕಾರ, ಹತ್ತು ಗ್ರಾಮ್ ಚಿನ್ನದ ಬೆಲೆ 66,778 ರೂಪಾಯಿಗೆ ಏರಿಕೆಯಾಗಿದೆ. ಹಿಂದಿನ ದಿನಕ್ಕಿಂತ ಇಂದು ಚಿನ್ನದ ಬೆಲೆಯಲ್ಲಿ ಗ್ರಾಮ್ ಗೆ 1,028 ರೂಪಾಯಿ ಹೆಚ್ಚಳವಾಗಿರುವುದಾಗಿ ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಒಂದು ಔನ್ಸ್ (28.34 ಗ್ರಾಮ್) ಚಿನ್ನದ ಬೆಲೆ 2,200 ಅಮೆರಿಕನ್ ಡಾಲರ್ ಗೆ (1,82,853.99 ಪೈಸೆ) ದಾಖಲೆ ಮಟ್ಟದಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ.
ಸಿಂಗಾಪುರ್ ನಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2,202 ಡಾಲರ್ ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ ಗೆ 6,180 ರೂಪಾಯಿ, 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್ ಗೆ 6,742 ರೂಪಾಯಿಗೆ ಏರಿಕೆಯಾಗಿದೆ.