Advertisement

Gold Price: ಚಿನ್ನದ ಸುಂಕ ಇಳಿಕೆ ಎಫೆಕ್ಟ್- 10 ಗ್ರಾಂ ಹಳದಿ ಲೋಹದ ಬೆಲೆ 5 ಸಾವಿರ ಇಳಿಕೆ

06:03 PM Jul 26, 2024 | |

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮೂರು ದಿನಗಳ ಹಿಂದಷ್ಟೇ 2024ನೇ ಸಾಲಿನ ಬಜೆಟ್‌ ಮಂಡಿಸಿದ್ದು, ಆಮದು ಚಿನ್ನದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಅದರ ಪರಿಣಾಮ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಶುಕ್ರವಾರ (ಜುಲೈ 26) ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂಪಾಯಿ ಇಳಿಕೆಯಾಗಿದೆ.

Advertisement

ಆಮದು ಚಿನ್ನದ ಮೇಲಿನ ಸುಂಕವನ್ನು ಶೇ.6.4ಕ್ಕೆ ಇಳಿಸಿದ ಬೆನ್ನಲ್ಲೇ ಹಳದಿ ಲೋಹದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಹೂಡಿಕೆದಾರರು ಮತ್ತು ಖರೀದಿದಾರರ ಗಮನ ಸೆಳೆದಿರುವುದಾಗಿ ವರದಿ ತಿಳಿಸಿದೆ.

ಆಮದು ಚಿನ್ನದ ಮೇಲಿನ ಸುಂಕವನ್ನು ಕಡಿತಗೊಳಿಸುವುದರಿಂದ ಚಿನ್ನ ಕಳ್ಳ ಸಾಗಣಿಕೆಗೆ ಕಡಿವಾಣ ಹಾಕುವುದರ ಜೊತೆಗೆ ಜ್ಯುವೆಲ್ಲರಿ ಸೆಕ್ಟರ್‌ ನ ವಹಿವಾಟನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯವಾಗಲಿದೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯವಾಗಿದೆ.

Advertisement

ಆಮದು ಚಿನ್ನದ ಮೇಲಿನ ಸುಂಕ ಇಳಿಕೆಯಿಂದ ಮಾರುಕಟ್ಟೆಯಲ್ಲಿ ಕೆಲವು ಅಸ್ಥಿರತೆಗೆ ಎಡೆ ಮಾಡಿಕೊಡಬಹುದಾದರು ಕೂಡಾ ದರ ಇಳಿಕೆಯಿಂದಾಗಿ ಚಿಲ್ಲರೆ ಹೂಡಿಕೆದಾರರು ಮತ್ತು ಖರೀದಿದಾರರನ್ನು ಆಕರ್ಷಿಸಲು ಸಹಾಯಕವಾಗುತ್ತದೆ ಎಂದು ವಿಪಿ ರಿಸರ್ಚ್‌ ವಿಶ್ಲೇಷಕ ಜತೀನ್‌ ತ್ರಿವೇದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next