Advertisement

ಮತ್ತೆ 37 ಸಾವಿರ ದಾಟಿದ ಚಿನ್ನದ ಬೆಲೆ

09:21 AM Aug 08, 2019 | Team Udayavani |

ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾದ ಪರಿಣಾಮ ಭಾರತದಲ್ಲೂ ಹಳದಿ ಲೋಹ ದುಬಾರಿಯಾಗಿದೆ.

Advertisement

ಬುಧವಾರ 10 ಗ್ರಾಂ.ಗೆ. 37,830 ರೂ.ಗಳು ದಾಖಲಾಗಿದ್ದವು. ಸತತ 5 ವರ್ಷಗಳಿಂದ ಚಿನ್ನದ ದರಗಳು ಏರಿಕೆಯಾಗುತ್ತಾ ಬಂದಿದ್ದು, ಕಳೆದ ತಿಂಗಳು 35 ಸಾವಿರದ ಗಡಿ ದಾಟಿತ್ತು. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಚಿನ್ನವು ಮುಂದಿನ ದಿನಗಳ ಸುರಕ್ಷಿತ ಹೂಡಿಕೆಯ ಕ್ಷೇತ್ರವಾಗಿದೆ. ಈ ಕಾರಣಕ್ಕೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಬಂದಿದೆ. ಜಾಗತಿಕ ಮಟ್ಟದಲ್ಲಿ ಚಿನ್ನ ದುಬಾರಿಯಾದ ಕಾರಣ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 10 ಗ್ರಾಂ.ಗೆ ಇದೀಗ 37,830 ರೂ. ದಾಖಲಾಗಿದೆ. ಇದು ಇತ್ತೀಚಿನ ವರ್ಷಗಳ ಸಾರ್ವಕಾಲಿಕ ದರವೂ ಹೌದು.

ಇತರ ಕಾರಣ ಏನು
ಮಧ್ಯಪ್ರಾಚ್ಯ ರಾಷ್ಟ್ರ ಇರಾನ್ ಬಿಕ್ಕಟ್ಟು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇರಾನ್‌ ನಲ್ಲಿ ತಲೆದೋರಿದ ಯುದ್ಧದ ಭೀತಿಯಿಂದ ವಿದೇಶದ ಫೆಡರಲ್ ಬ್ಯಾಂಕುಗಳು ಚಿನ್ನವನ್ನು ಹೆಚ್ಚು ಖರೀದಿಸಲು ಮುಂದೆ ಬಂದಿದ್ದವು. ಇದು ಬೆಲೆ ಏರಿಕೆಗೆ ಮತ್ತಷ್ಟು ಪುಷ್ಟಿ ಕೊಟ್ಟವು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ತನ್ನ ರೆಪೋ ದರವನ್ನು ಇಳಿಸಿದೆ. ಇದು ಈ ಬಾರಿಯ ಏರಿಕೆಗೆ ಒಂದು ಕಾರಣ ಎಂದು ಹೇಳಲಾಗುತ್ತದೆ. 4 ಬಾರಿ ರೆಪೋ ದರ ಇಳಿಕೆಯಾದಗಲೂ ಚಿನ್ನ ಮಾರುಕಟ್ಟೆ ಜಿಗಿದಿತ್ತು ಎಂಬುದು ಉಲ್ಲೇಖನೀಯ. ಆದರೆ ಇಂದಿನ ಏರಿಕೆಗೆ ಅಂತಾರಾಷ್ಟ್ರೀಯ ಬೆಳವಣಿಗೆಗಳು ಕಾರಣ ಎಂದು ಹೇಳಲಾಗುತ್ತಿದೆ.

Advertisement

ಜಿಗಿದ ಬೆಳ್ಳಿ
ಒಂದೆಡೆ ಚಿನ್ನದ ಮಾರುಕಟ್ಟೆ ಏರುತ್ತಾ ಹೋಗುತ್ತಿದ್ದಂತೆ ಬೆಳ್ಳಿ ದರವೂ ಏರು ಗತಿಯನ್ನು ಕಂಡಿದೆ. ಸೋಮವಾರ ಕೆ.ಜಿ.ಗೆ 43,248 ರೂ. ಪರಿಷ್ಕೃತ ದರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next