ಕಷ್ಟಕಾಲಕ್ಕೆ ಅಂತ ಸ್ವಲ್ಪ ಹಣ ಸಂಪಾದನೆ ಮಾಡಿದ್ದೇನೆ. ಅದನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದೇನೆ. ಒಂದು ದೊಡ್ಡ ಮೊತ್ತದ ಇಡುಗಂಟನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ಇಟ್ಟಿರುವ ವಿಷಯವಾಗಿ ಮೊನ್ನೆ ಮೊನ್ನೆಯತನಕ ಖುಷಿ ಮತ್ತು ಹೆಮ್ಮೆ ಇತ್ತು.ಕಾರಣ, ಒಂದುಕಡೆಯಲ್ಲಿ ಫಿಕ್ಸೆಡ್ ಮಾಡಿದ ಹಣ ಭದ್ರವಾಗಿದೆ ಎಂಬ ಭಾವ, ಅದರ ಜೊತೆಗೆ, ಪ್ರತಿ ವರ್ಷವೂ ಆ ಹಣಕ್ಕೆ ಸಿಗುತ್ತಿದ್ದ ಆಕರ್ಷಕ ಬಡ್ಡಿ.
ಆದರೆ, ಈ ವರ್ಷದ ಆರಂಭದಲ್ಲಿಯೇ ಬ್ಯಾಂಕ್ ನ ಮ್ಯಾನೇಜರ್ ನೇರವಾಗಿ ಹೇಳಿಬಿಟ್ಟರು:” ನೋಡಿಇವರೇ, ನೀವು ನಮ್ಮ ಹಳೆಯ ಗ್ರಾಹಕರು. ಹಾಗಾಗಿ ಹೇಳ್ತಾ ಇದ್ದೇನೆ. ಇನ್ನು ಮುಂದೆ ಫಿಕ್ಸೆಡ್ ಆಗಿಇಡುವ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುವುದಿಲ್ಲ. ಬ್ಯಾಂಕ್‌ನ ಬಡ್ಡಿ ನಂಬಿಕೊಂಡು ಜೀವನ ಮಾಡಬಹುದು ಅನ್ನುವಯೋಚನೆಯನ್ನು ಮನಸ್ಸಿಂದ ತೆಗೆದುಹಾಕಿಬಿಡಿ. ಫಿಕ್ಸೆಡ್ ಡಿಪಾಸಿಟ್‌ನ ಹಣವನ್ನು ಭೂಮಿಯ ಮೇಲೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿ…” ಬ್ಯಾಂಕ್ ಮ್ಯಾನೇಜರ್ ಹೀಗೆ ಹೇಳಿದ ಮೇಲೆ ಏನು ಮಾಡುವುದು? – ಹೀಗೊಂದು ಪ್ರಶ್ನೆಕೇಳಿ ಆ ಹಿರಿಯರುತಲೆಮೇಲೆಕೈ ಹೊತ್ತು ಕೂತು ಬಿಟ್ಟರು. ಇದು ಯಾರೋ ಒಬ್ಬರ ಸಮಸ್ಯೆ ಅಲ್ಲ. ಬ್ಯಾಂಕ್‌ನಲ್ಲಿಫಿಕ್ಸೆಡ್ ಡಿಪಾಸಿಟ್ ಎಂದು ಹಣ ಇಟ್ಟಿರುವ ಬಹುಮಂದಿಯ ಪ್ರಶ್ನೆ.
ಈಗಿನ ಪರಿಸ್ಥಿತಿ ನೋಡಿದರೆ, ಬ್ಯಾಂಕ್ ನ ಬಡ್ಡಿ ದರದಲ್ಲಿ ಏರಿಕೆ ಆಗುವುದು ಸಾಧ್ಯವೇ ಇಲ್ಲ. ಏನಿದ್ದರೂ ಮುಂದೆ ಈಗಿರುವ ಬಡ್ಡಿಯ ಪ್ರಮಾಣ ಕೂಡ ಕಡಿಮೆ ಆಗುತ್ತಲೇ ಹೋಗಬಹುದು, ಅಷ್ಟೇ. ಇಂಥ ಸಂದರ್ಭದಲ್ಲಿ ನಾವುಕಷ್ಟ ಪಟ್ಟುಕೂ ಡಿಟ್ಟ ಹಣಕ್ಕೆ ತಕ್ಕ ಬೆಲೆ ಸಿಗಬೇಕು, ಆ ಹಣದಮೌಲ್ಯ ದಿನಗಳೆದಂತೆ ಹೆಚ್ಚಬೇಕು ಅನ್ನುವವರು ಸೈಟ್ ಖರೀದಿಸುವುದು ಒಳ್ಳೆಯದು. ಏಕೆಂದರೆ, ಬೆಂಗಳೂರೂ ಸೇರಿದಂತೆ ರಾಜ್ಯದ ಎಲ್ಲಾ ನಗರದಲ್ಲಿಯೂ ಭೂಮಿಗೆ ಚಿನ್ನದಂಥಾ ಬೆಲೆಯಿದೆ.ಈಗ ಬರಡು ಭೂಮಿಯಂತೆಕಾಣಿಸಿದ್ದು ಇನ್ನು 3 ವರ್ಷಗಳಲ್ಲಿ ನಂಬಲುಕಷ್ಟ ಅನ್ನುವಂತೆ ಅಭಿವೃದ್ಧಿ ಹೊಂದಿದ ಹಲವು ಉದಾಹರಣೆಗಳಿವೆ. ಹಾಗಾಗಿ, ಎಷ್ಟು ಬರುತ್ತದೋ ಅಷ್ಟು ಬಡ್ಡಿ ಸಾಕು ಎಂದು ಬ್ಯಾಂಕ್‌ನಲ್ಲಿ ಹಣ ಇಡುವ ಬದಲು, ಫಿಕ್ಸೆಡ್ ಆಗಿರುವ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ತೆಗೆದು, ಅದರಲ್ಲಿ ಒಂದು ಚಿಕ್ಕ ಸೈಟ್ ಖರೀದಿಸುವುದು ಜಾಣತನ. ( ಸೈಟ್ ಖರೀದಿಗೆಂದು ಸಾಲ ಮಾಡುವ ಮೂರ್ಖತನ ಬೇಡ) ಹೀಗೆ ಮಾಡುವುದರಿಂದ, ಹೊಸದೊಂದು ಆಸ್ತಿ ಖರೀದಿಸಿದ ತೃಪ್ತಿಯೂ ಸಿಗುತ್ತದೆ.
ಕಷ್ಟಕಾಲಕ್ಕೆ ಬ್ಯಾಂಕ್‌ನಲ್ಲಿ ಸ್ವಲ್ಪ ಹಣ ಉಳಿಸಿದ ಸಮಾಧಾನವೂ ಜೊತೆಯಾಗುತ್ತದೆ. ಆದರೆ, ಒಂದು ವಿಷಯ ನೆನಪಲ್ಲಿ ಇರಲಿ: ಸೈಟ್ ಖರೀದಿಸುವಾಗ, ಸಂಬಂಧಪಟ್ಟ ದಾಖಲೆಗಳು ಒರಿಜಿನಲ್ ಇದ್ದವಾ ಎಂದು ಒಂದಲ್ಲ; ಹತ್ತು ಬಾರಿ ಗ್ಯಾರಂಟಿ ಮಾಡಿಕೊಳ್ಳಬೇಕು. ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನೂ ತಪ್ಪದೇ ಪಡೆಯಬೇಕು. ಭೂಮಿಗೆ ಯಾವತ್ತೇ ಆದರೂ ಬಂಗಾರದ ಬೆಲೆ ಸಿಕ್ಕೇ ಸಿಗುವುದರಿಂದ, ಅದರ ಮೇಲೆ ಹೂಡಿದ ಹಣಕ್ಕೆ ಎಂದೂ ಮೋಸವಾಗುವುದಿಲ್ಲ.