ಮಡಿಕೇರಿ: ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಚಿನ್ನವನ್ನು ಕರಗಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ರಾಜಕುಮಾರ (29), ಪ್ರವೀಣ್ ಕುಮಾರ (32) ಹಾಗೂ ಲಲನ್ ಕುಮಾರ್ (26) ಬಂಧಿತರು. ಅವರಿಂದ 15 ಗ್ರಾಂ ಚಿನ್ನ ಮತ್ತು ಪಾಲಿಶ್ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ. 25ರಂದು ಕುಶಾಲನಗರದ ಹೆಬ್ಟಾಲೆ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 3 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಪಾಲಿಶ್ ನೆಪದಲ್ಲಿ ಸಾರ್ವಜನಿಕರಿಗೆ ವಂಚಿಸಿ ಚಿನ್ನ ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಎಚ್ಚರ ಅಗತ್ಯ
ಮನೆ ಮನೆಗೆ ಆಗಮಿಸಿ ಚಿನ್ನಾಭರಣ ಪಾಲಿಶ್ ಮಾಡುವುದಾಗಿ ಹೇಳುವ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಪಾಲಿಶ್ ಹಾಗೂ ಇತರ ಕಾರ್ಯಗಳಿಗೆ ಸ್ಥಳೀಯ ಅಧಿಕೃತ ಜುವೆಲರಿ ಅಂಗಡಿಗಳಲ್ಲಿ ಮಾಡಿಸುವಂತೆ ಸೂಚಿಸಿದ ಪೊಲೀಸರು ಇಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.