Advertisement

ಚಿನ್ನ ನಾಪತ್ತೆ ಪ್ರಕರಣದ ಕಿಂಗ್ ಪಿನ್ ಕಿರಣ್ ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

01:23 PM Jun 08, 2021 | Team Udayavani |

ಸಂಕೇಶ್ವರ: ಯಮಕನಮರಡಿ ‌ಪೊಲೀಸ್ ಠಾಣೆಯಲ್ಲಿದ್ದ ಕಾರಿನಲ್ಲಿನ ಚಿನ್ನ ಕಳ್ಳತನ ಪ್ರಕರಣದ ಕಿಂಗ್ ಫಿನ್ ಎನ್ನಲಾದ ಕಿರಣ ವೀರನಗೌಡನನ್ನು 14 ದಿನ ಸಿಐಡಿ ವಶಕ್ಕೆ ಪಡೆದ ಬೆನ್ನಲ್ಲೇ ಎರಡನೇ ದಿನ ಮಂಗಳವಾರವೂ ಸಂಕೇಶ್ವರ ಠಾಣೆಯಲ್ಲಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಇದರಿಂದ ಕಿರಣನ ಬೆನ್ನಿಗೆ ನಿಂತಿರುವ ಅಧಿಕಾರಿಗಳಲ್ಲಿ ವಿಚಾರಣೆ ಎದುರಿಸುವ ನಡುಕ ಶುರುವಾಗಿದೆ.

Advertisement

ಪ್ರಕರಣದ ಜಾಡು ಹಿಡಿದಿರುವ ಸಿಐಡಿ ‌ಅಧಿಕಾರಿಗಳು ಚಿನ್ನ ಕಳ್ಳತನದ‌ ಕಿಂಗ್ ಫಿನ್ ಕಿರಣನನ್ನು ಸೋಮವಾರ ಬೆಳಗಾವಿಯ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದರು. ಬಳಿಕ ಈತನನ್ನು ಇನ್ನೂ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ಮನವಿ ಮಾಡಿದ್ದರು. ಅದರಂತೆ ನ್ಯಾಯಾಲಯ 14 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ:ಕೆಲವು ಅಭಿಪ್ರಾಯಗಳು ಎಲ್ಲರ ಅಭಿಪ್ರಾಯವಲ್ಲ,ನಮಗೆ ಪ್ರತ್ಯೇಕ ವ್ಯವಸ್ಥೆ ಮಾಡಿ: ಸುನೀಲ್ ಕುಮಾರ್

ನ್ಯಾಯಾಲಯದ ಆದೇಶದಂತೆ ಕಿರಣನನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಸೋಮವಾರ ಸಂಕೇಶ್ವರದಲ್ಲಿಯೇ ಬೀಡು ಬಿಟ್ಟು ಮಂಗಳವಾರವೂ ವಿಚಾರಣೆ ಮುಂದುವರಿಸಿದ್ದಾರೆ.

Advertisement

ಕಿರಣ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದ ಹಾಗೂ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ರೂಪುರೇಷೆಗಳನ್ನು ತಯಾರಿಸಿರುವ ಬಗ್ಗೆ ಮತ್ತು ಡೀಲ್ ಮಾಡಿರುವ ಕುರಿತು ಮೂರು ಠಾಣೆಯಲ್ಲಿ ಪ್ರತೇಕ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.

ಅಲ್ಲದೆ ಕಿರಣನಿಗೆ ಸಹಕಾರ ನೀಡುವ ಮೂಲಕ ಇಲಾಖೆಗೆ ‌ಮುಜುಗರ ಉಂಟು ಮಾಡಿದ್ದ ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಐಡಿ ವಿಚಾರಣೆ ನಡೆಸುತ್ತಿರುವುದರಿಂದ ಈತನ ಬೆನ್ನಿಗೆ ನಿಂತಿದ್ದ ಅಧಿಕಾರಿಗಳಲ್ಲಿ ನಡುಕ ಶುರು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next