ಶಿರಸಿ: ಫ್ರಾನ್ಸ್ ದೇಶದ ನಾರ್ಮುಂಡಿಯಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬಂಗಾರ ಪದಕ ವಿಜೇತ ಪ್ರೇರಣಾ ನಂದಕುಮಾರ ಶೇಟ್ ಗೆ ನಗರದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಾಗರಿಕ ಸಮ್ಮಾನ ಮಾಡಲಾಯಿತು.
ನಾಗರಿಕ ಸಮ್ಮಾನ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಜಿಲ್ಲೆಯ ಹೆಮ್ಮೆ ಅಭಿಮಾನ ಪಡೆಯುವ ಸಾಧನೆ ಆಗುತ್ತಿದೆ. ಪ್ರೇರಣಾ ಸಾಧನೆ ಆ ಸಾಲಿನಲ್ಲಿ ಸೇರಿದೆ. ಈ ಸಾಧನೆಗೆ ತೃಪ್ತಿ ಪಡೆಯದೇ ಮುಂದೆ ಹೋಗಬೇಕು. ಒಲಿಂಪಿಕ್ ಸಾಧನೆ ಆಗಬೇಕು. ಸಂತೋಷ ಪಡಬೇಕು, ಆದರೆ ತೃಪ್ತಿ ಪಡಬಾರದು. ಗುರಿ ತಲುಪುವ ತನಕ ನಿರಂತರ ಮುನ್ನಡೆಯಬೇಕು. ಸರಕಾರದಿಂದ ಎರಡು ಲ.ರೂ. ಪ್ರೋತ್ಸಾಹ ಕೊಡಲಾಗುತ್ತದೆ. ಕಾಲೇಜಿನ ಓದು ಕೂಡ ಭರಿಸುತ್ತದೆ. ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ಒಲಿಂಪಿಕ್ ಸಿದ್ದತೆಗೆ 75ರಲ್ಲಿ ಪ್ರೇತಣಾಳನ್ನೂ ಒಬ್ಬ ಮಾಡಲಾಗುತ್ತದೆ ಎಂದರು.
ಲಯನ್ ರವಿ ಹೂವಿನಮನೆ, ಸಾಧನೆ ಮಾಡುವದರ ಜೊತೆ ನಿರಂತರ ಉಳಿಸಿಕೊಳ್ಳುವ ಕಾರ್ಯ ಕೂಡ ಆಗಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್ ವಿಜಿ ಭಟ್ ಮಾತನಾಡಿ, ಪ್ರೇರಣಾ ರಾಷ್ಟ್ರದ ಕೀರ್ತಿ ಬೆಳಗಲಿ ಎಂದರು.
ಡಿವೈಎಸ್ಪಿ ರವಿ ನಾಯಕ, ಬಿಇಓ ಎಂ.ಎಸ್.ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಲಯನ್ಸ್ ಅಧ್ಯಕ್ಷ ಉದಯ ಸ್ವಾದಿ, ಲಯನ್ಸ್ ಗೌರವಾಧ್ಯಕ್ಷ ರವಿ ನಾಯಕ, ನಂದಕುಮಾರ ಶೇಟ್, ಸ್ವಾತಿ ಶೇಟ್, ಗುರುರಾಜ ಹೆಗಡೆ, ಮನಿಷ್ ಇತರರು ಇದ್ದರು.
ಸೀತಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರ್ವಹಿಸಿದರು. ವಿನಯ ಬಸವನಕಟ್ಟೆ ವಂದಿಸಿದರು. ನಗರದ ಪ್ರಮುಖ ಸಂಘಟನೆಗಳು ಚಿನ್ನದ ಹುಡುಗಿಯನ್ನು ಅಭಿನಂದಿಸಿದರು. ಫ್ರಾನ್ಸ್ ನಿಂದ ಶಿರಸಿಗೆ ಆಗಮಿಸಿದ ಪ್ರೇರಣಾಳನ್ನು ನಿಲೆಕಣಿಯಿಂದ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು.