Advertisement
ಇಂಟರ್‌ನ್ಯಾಶನಲ್ ಕರಾಟೆ ಸ್ಪರ್ಧೆಯಲ್ಲಿ ಒಟ್ಟು 8 ದೇಶಗಳ 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಇತನು ಬಂಗಾರದ ಪದಕ ಪಡೆದು, ಇನ್ನೊಂದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಬಂದಿದ್ದಾನೆ. ಮೂಲತಃ ಕೂಡಲಸಂಗಮ ಗ್ರಾಮದವನಾದ ನಾಗೇಶ ತಳವಾರ ಕರಾಟೆಯಲ್ಲಿ ಆಸಕ್ತನಾಗಿ ಕರಾಟೆ ಕಲಿತು 10 ವರ್ಷಗಳ ಹಿಂದೆ ಇಳಕಲ್ಲ ನಗರಕ್ಕೆ ಬಂದು ಇಲ್ಲಿಯ ಅನೇಕ ಶಾಲೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕರಾಟೆಯನ್ನು ಮಕ್ಕಳಿಗೆ ಕಲಿಸುತ್ತ ಭಾರತಾದ್ಯಂತ ಸಂಚರಿಸಿ ಅನೇಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ. 2015ರಲ್ಲಿ ಭೂತಾನ ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಬೆಂಗಳೂರಿನ ಕರಾಟೆ ಟ್ರಸ್ಟ್ ಮುಖಾಂತರ ಮಲೇಶಿಯಾ ದೇಶಕ್ಕೆ ಹೋಗಲು ಇಳಕಲ್ಲ ನಗರದ ಅನೇಕ ದಾನಿಗಳು ನಾಗೇಶನಿಗೆ ಹಣದ ಸಹಾಯ ಮಾಡಿದ್ದಾರೆ. ಆದರೆ ಇಂಥ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳಿಗೆ ಸರಕಾರ ಜೀವನ ನಿರ್ವಹಣೆಗೆ ಉದ್ಯೋಗ ಕಲ್ಪಿಸಿ ಪ್ರೋತ್ಸಾಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. Advertisement
ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ನಾಗೇಶಗೆ ಬಂಗಾರ ಪದಕ
11:29 AM May 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.