ಬೆಂಗಳೂರು: ತನ್ನ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳು ಸುರಕ್ಷಿತವಾಗಿ ಇರಬೇಕು ಎಂದು ಬ್ಯಾಂಕ್ ನ ಲಾಕರ್ ನಲ್ಲಿದ್ದ ವ್ಯಕ್ತಿ, ತನ್ನ ಒಡವೆಗಳನ್ನು ಹಿಂಪಡೆಯಲು ಬಂದಾಗ ಯಾವುದೇ ಆಭರಣಗಳು ಕಾಣದೆ ಕಂಗಾಲಾದ ಘಟನೆ ರಾಜ್ಯ ರಾಜಧಾನಿಯ ಜಯನಗರದಲ್ಲಿ ನಡೆದಿದೆ.
ಜೆಪಿನಗರದ ಉದ್ಯಮಿ ಶಿವಪ್ರಸಾದ್ ಎಂಬವರು ಬ್ಯಾಂಕ್ ಆಫ್ ಬರೋಡಾ ದ ಜಯನಗರ ಶಾಖೆಯಲ್ಲಿ ಮೂರು ಲಾಕರ್ ಗಳನ್ನು ಹೊಂದಿದ್ದಾರೆ. ಕಳೆದ ಫೆಬ್ರವರಿ ಆರರಂದು 24ನೇ ಕ್ರಮಾಂಕದ ಲಾಕರಿನಲ್ಲಿ ತನ್ನದ ಚಿನ್ನದ ಒಡವೆಗಳನ್ನು ಇರಿಸಿದ್ದರು. ನಂತರ ಫೆ.27ರಂದು ವಿವಾಹ ವಾರ್ಷಿಕೋತ್ಸವದ ಸಲುವಾಗಿ ಕೆಲವು ಆಭರಣಗಳನ್ನು ತಂದಿದ್ದರು. ಆದರೆ ನಂತರ ಲಾಕ್ ಡೌನ್ ಕಾರಣದಿಂದ ಕೆಲವು ಕಾಲ ಬ್ಯಾಂಕ್ ಗೆ ಹೋಗದೇ ಸಾಧ್ಯವಾಗದೇ ಜು.27ರಂದು ಬ್ಯಾಂಕ್ ಗೆ ಹೋದಾಗ ಒಡವೆಗಳು ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟು ಒಂದು ಕೆಜಿ 73 ಗ್ರಾಂ ತೂಕದ ಒಟ್ಟು 85 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಬ್ಯಾಂಕ್ ಲಾಕರಿನಿಂದ ಕಳವಾಗಿದೆ. ಬ್ಯಾಂಕ್ ಸಿಬ್ಬಂದಿ ಅಥವಾ ಇನ್ಯಾರೋ ಕಳವು ಮಾಡಿದ್ದಾರೆ ಎಂದು ಶಿವಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಪ್ಪತ್ತೈದು ವರ್ಷಗಳ ಬದುಕಿನಲ್ಲಿ ಅವಳಿಗೆ ಎಪ್ಪತ್ತೈದು ಬಗೆಯ ಕಷ್ಟಗಳು ಬಂದವು
ಜಯನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.