Advertisement
ಪರಿಣಾಮ ಈಗ ಅದೇ ಕೊರಳಲ್ಲಿ ಚಿನ್ನದ ಪದಕಗಳ ಗೊಂಚಲು ಮಿನುಗುತ್ತಿವೆ. ಹೌದು, ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೆ.ಸುಮಾ ದ್ವಿತೀಯ ಪಿಯುಸಿ ಮುಗಿಸಿಕೊಂಡು ವೈದ್ಯಕೀಯ ಪರೀಕ್ಷೆ ಬರೆದಿದ್ದರು. ಸೀಟು ಕೂಡ ಸಿಕ್ಕಿತ್ತು.
Related Articles
Advertisement
“ವರ್ಷದಿಂದ ವರ್ಷಕ್ಕೆ ಬರ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬರ ಸಹಿಷ್ಣುತೆ ಇರುವ ತಳಿಗಳನ್ನು ಕಂಡುಹಿಡಿದು, ರೈತರಿಗೆ ಪರಿಚಯಿಸುವುದು, ಕೃಷಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವುದು ನನ್ನ ಗುರಿ’ ಎಂದು ಹೇಳಿದರು.
ಆಕಸ್ಮಿಕ ಆಯ್ಕೆಗೆ ಆರು ಚಿನ್ನದ ಪದಕ!: ಅದೇ ರೀತಿ, ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಯಲ್ಲಿ ಆರು ಚಿನ್ನದ ಪದಕ ಗಳಿಸಿದ ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಅವರ ಪುತ್ರಿ ವೈ.ಎಲ್. ರಂಜಿತಾ, ಕೃಷಿ ಪದವಿ ಆಯ್ಕೆ ಮಾಡಿಕೊಂಡಿದ್ದು ಆಕಸ್ಮಿಕ. ಆದರೆ, ಅದರಲ್ಲೇ ಚಿನ್ನದ ಪದಕಗಳನ್ನು ಕೊಳ್ಳೆಹೊಡೆದಿದ್ದಾಳೆ.
“ಐಎಎಸ್ ಮಾಡಬೇಕೆಂಬ ಗುರಿ ಇತ್ತು. ಆದರೆ, ಅದಕ್ಕೊಂದು ಪದವಿ ಬೇಕಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಮಾಡಲು ನಿರ್ಧರಿಸಿದೆ. ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡರೂ ಆಸಕ್ತಿಯಿಂದ ಓದಿದೆ. ಪರಿಣಾಮ ಆರು ಚಿನ್ನದ ಪದಕಗಳು ಬಂದವು.
ಈಗಲೂ ಐಎಎಸ್ ಆಗುವುದೇ ನನ್ನ ಗುರಿ. ಯಾಕೆಂದರೆ, ನೀತಿ-ನಿರೂಪಣೆಗಳ ರಚನೆಯಲ್ಲಿ ಇದು ಬಹುಮುಖ್ಯ ಪಾತ್ರ ವಹಿಸಲಿದೆ. ಆ ಮೂಲಕ ಕೃಷಿಗೆ ಪೂರಕವಾದ ನೀತಿಗಳನ್ನು ರೂಪಿಸಲು ನೆರವಾಗುತ್ತೇನೆ’ ಎಂದರು. ಇವರು ಬೆಂಗಳೂರು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆಗಿದ್ದಾರೆ.
ಬಿಎಸ್ಸಿ (ಕೃಷಿ)ಯಲ್ಲಿ ಆರು ಚಿನ್ನದ ಪದಕ ಗಳಿಸಿದ ಮಂಡ್ಯದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಟಿ.ಡಿ.ಗೌಡ ಮಾತನಾಡಿ, “ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಹಾಗಾಗಿ, ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ಒಳ್ಳೆಯ ಆಡಳಿತಗಾರ ಆಗಬೇಕು ಎನ್ನುವುದು ತಂದೆಯ ಆಸೆ. ಆ ನಿಟ್ಟಿನಲ್ಲಿ ನನ್ನ ಅಧ್ಯಯನ ನಡೆದಿದೆ’ ಎಂದರು.