Advertisement
ಈ ಚಿನ್ನದ ಗಣಿಯನ್ನು ಕೆಲವು ವರ್ಷಗಳ ಹಿಂದಷ್ಟೇ ಮುಚ್ಚಲಾಗಿತ್ತು. ಆರ್ಥಿಕವಾಗಿ ಸಾಧುವಲ್ಲದ ಕಾರಣ ಗಣಿಯನ್ನು ಮುಚ್ಚಿದ್ದು, ಈಗ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಮರು ಆರಂಭಿಸಲು ಚಿಂತನೆ ನಡೆಸಲಾಗಿದೆ. ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿ ಈ ಗಣಿ ಇದೆ.ಇದಲ್ಲದೆ, ತಮಿಳುನಾಡಿನ ತಸಂಪಾಳ್ಯಂನಲ್ಲಿ ಅಂದಾಜು 0.402 ಮಿಲಿಯನ್ ಟನ್‌ಗಳಷ್ಟು “ಪ್ಲಾಟಿನಂ ಗ್ರೂಪ್ ಎಲಿಮೆಂಟ್ಸ್’ (ಪಿಜಿಇ) ಪತ್ತೆಯಾಗಿದ್ದು, ಇದರಲ್ಲಿ ಪ್ರತಿ ಟನ್‌ಗೆ 1.52ರಷ್ಟು ಪ್ಲಾಟಿನಂ ಹೊರತಗೆಯಬಹುದಾಗಿದೆ ಎಂದು ಜಿಎಸ್‌ಐನ ದಕ್ಷಿಣ ಪ್ರಾಂತ್ಯದ ಮಹಾ ನಿರ್ದೇಶಕ ಎಂ. ಶ್ರೀಧರ್ ತಿಳಿಸಿದ್ದಾರೆ. ಇದಲ್ಲದೆ, ಕರ್ನಾಟದ ಬೆಳಗಾವಿ ಜಿಲ್ಲೆ, ಆಂಧ್ರಪ್ರದೇಶದ ಗುಂಟೂರು, ಕರ್ನೂಲು ಜಿಲ್ಲೆ ಹಾಗೂ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯಲ್ಲಿ ಸುಣ್ಣದ ಕಲ್ಲುಗಳ ನಿಕ್ಷೇಪ ಪತ್ತೆಯಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.