ಮುಂಬಯಿ: ಕಳೆದ ವರ್ಷ ಲಾಕ್‌ಡೌನ್ ತೆರವಾದ ಬಳಿಕ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವರ್ಧನೆಯಿಂದಾಗಿ ಹೊಸ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆ ಶೇ. 37ರಷ್ಟು ಏರಿಕೆ ದಾಖಲಿಸಿದೆ.
2020ರ ಇದೇ ಅವಧಿಯಲ್ಲಿ 102 ಟನ್ ಚಿನ್ನಕ್ಕೆ ಬೇಡಿಕೆ ಕಂಡುಬಂದಿತ್ತಾದರೆ ಈ ವರ್ಷ ಅದು 140 ಟನ್‌ಗಳಿಗೆ ಏರಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಅಂಕಿಅಂಶಗಳು ತಿಳಿಸಿವೆ.
ಆಭರಣ ರೂಪದ ಚಿನ್ನದ ಬೇಡಿಕೆ ಶೇ. 39ಕ್ಕೆ, ಚಿನ್ನದ ಗಟ್ಟಿ, ಬಿಸ್ಕಿಟ್, ಇ-ಗೋಲ್ಡ್, ಇಟಿಎಫ್ ಇತ್ಯಾದಿ ಚಿನ್ನದ ಮೇಲಿನ ಹೂಡಿಕೆಯು ಶೇ. 34ಕ್ಕೆ ಏರಿದೆ ಎಂದು ಅದು ತಿಳಿಸಿದೆ.
ಇದನ್ನೂ ಓದಿ ;ಕರಾವಳಿಯಲ್ಲೂ ತರಕಾರಿಗಳ ಬೆಲೆ ಏರಿಕೆ : ರಾಜ್ಯದ APMCಗಳಲ್ಲಿ ಕೊಳೆಯುತ್ತಿದೆ ಕೃಷ್ಯುತ್ಪನ್ನ
ಈ ತ್ತೈಮಾಸಿಕದಲ್ಲಿ ವಿದೇಶಗಳಿಂದ ಚಿನ್ನದ ಆಮದು ಮೂರು ಪಟ್ಟು ಹೆಚ್ಚಿದೆ. 2020ರ ಇದೇ ಅವಧಿಯಲ್ಲಿ 83.1 ಟನ್ ಚಿನ್ನ ಆಮದಾಗಿದ್ದರೆ, 2021ರ ಜನವರಿ -ಮಾರ್ಚ್ ಅವಧಿಯಲ್ಲಿ 301 ಟನ್ ಸ್ವರ್ಣ ಆಮದಾಗಿದೆ.