ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ವಿಮಾನವೊಂದರ ಶೌಚಾಲಯದಲ್ಲಿ ಸುಮಾರು ಎರಡು ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದೇಶದಿಂದ ನಾನಾ ರೀತಿಯಲ್ಲಿ ಚಿನ್ನಗಳನ್ನು ಅಕ್ರಮವಾಗಿ ಸ್ವದೇಶಕ್ಕೆ ತರಲಾಗುತ್ತಿದ್ದು ಇದೀಗ ಆರೋಪಿಗಳು ವಿಮಾನ ಶೌಚಾಲಯದಲ್ಲಿ ತ್ಯಾಜ್ಯರೂಪದಲ್ಲಿ ಚಿನ್ನವನ್ನು ಸಾಗಿಸುವ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಶೌಚಾಲಯದಲ್ಲಿ ಇರಿಸಿದ್ದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಮೊದಲು ಪ್ರಯಾಣಿಕರು ಒಳ ಉಡುಪು, ಸೂಟ್‍ಕೇಸ್, ಶೂ, ಬೆಲ್ಟ್ ಗಳಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದದ್ದು ಕಂಡು ಬರುತ್ತಿತ್ತು. ಆದರೆ ಇದೀಗ ಕಳ್ಳರು ವಿಮಾನದ ಶೌಚಾಲಯದಲ್ಲೇ ಚಿನ್ನವನ್ನು ಅಡಗಿಸಿಟ್ಟು ತಂದಿದ್ದಾರೆ.
Related Articles
ಶೌಚಾಲಯದ ಸಿಂಕ್ ಕೆಳಗೆ ತಾಜ್ಯಸ್ವರೂಪದಲ್ಲಿ ಅಂಟಿಸಿಡಲಾದ ನಾಲ್ಕು ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು. ಇದರ ಒಟ್ಟು ಮೌಲ್ಯ ಸುಮಾರು 1.95 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ.
ಘಟನೆ ಕುರಿತು ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ಶಸ್ತಾಸ್ತ್ರವನ್ನು ಇರಿಸಿಕೊಂಡ ಆರೋಪ: ಮಹಿಳಾ ಪೊಲೀಸ್ ಎಸ್ ಐ ಬಂಧನ