Advertisement

ರಷ್ಯಾ ಮೇಲೆ ಚಿನ್ನದ ಬಾಣ

12:39 AM Jun 27, 2022 | Team Udayavani |

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವಂತೆಯೇ, ಜಿ7 ರಾಷ್ಟ್ರಗಳು ರಷ್ಯಾಗೆ ಮರ್ಮಾಘಾತ ನೀಡಲು ತಯಾರಿ ನಡೆಸಿವೆ. ಯಾವುದೇ ನಿರ್ಬಂಧಗಳಿಗೆ ಬಗ್ಗದ
ಪುತಿನ್‌ಗೆ ಪಾಠ ಕಲಿಸುವ ನಿಟ್ಟಿನಲ್ಲಿ ರಷ್ಯಾದ ಚಿನ್ನದ ಆಮದು ಮೇಲೆ ನಿರ್ಬಂಧ ಹೇರಲು ಜಿ7 ರಾಷ್ಟ್ರಗಳು ನಿರ್ಧರಿಸಿವೆ. ಮಂಗಳವಾರ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.

Advertisement

ಆದಾಯದ ಮೂಲ
ಇಂಧನದ ಬಳಿಕ ರಷ್ಯಾದ ಪ್ರಮುಖ ಆದಾ ಯದ ಮೂಲವೇ ಚಿನ್ನ. ಹಳದಿ ಲೋಹದ ರಫ್ತಿನಿಂದ ರಷ್ಯಾ ಪ್ರತೀ ವರ್ಷವೂ ಭಾರೀ ಪ್ರಮಾಣದ ಆದಾಯ ಗಳಿಸುತ್ತಿದೆ.

ಸಂಪತ್ತು ಚಿನ್ನದ ರೂಪಕ್ಕೆ ತಿರುಗಿತ್ತು
ಹಿಂದಿನಿಂದಲೂ ಹಳದಿ ಲೋಹವನ್ನು ಬಿಕ್ಕಟ್ಟಿನ ಸಂದರ್ಭದ “ಆಶ್ರಯ ಸರಕು’ ಎಂದೇ ಪರಿಗಣಿಸಲಾಗುತ್ತದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದಾಗ ಪಾಶ್ಚಿಮಾತ್ಯ ದೇಶಗಳು ಒಂದಾದ ಮೇಲೆ ಒಂದರಂತೆ ದಿಗ್ಬಂಧನವನ್ನು ಹೇರುತ್ತಾ ಬಂದವು. ಆಗ ರಷ್ಯಾದ ಶ್ರೀಮಂತರೆಲ್ಲ ತಮ್ಮಲ್ಲಿದ್ದ ಹಣವನ್ನು ಚಿನ್ನವಾಗಿ ಪರಿವರ್ತಿಸುವ ಮೂಲಕ ಸಂಪತ್ತನ್ನು ಮುಚ್ಚಿಟ್ಟಿದ್ದರು. ಈಗ ಚಿನ್ನದ ಆಮದಿನ ಮೇಲಿನ ನಿರ್ಬಂಧವು ಅವರಿಗೆ ದೊಡ್ಡ ಮಟ್ಟದ ಪೆಟ್ಟು ನೀಡಲಿದೆ.

ಈಗಾಗಲೇ ನಿರ್ಬಂಧದ ಬಿಸಿ?
ಈಗಾಗಲೇ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಬ್ಯಾಂಕ್‌ಗಳು, ಇಂಧನ ಕಂಪೆನಿಗಳು, ವಿಮಾನಯಾನ ಕಂಪೆನಿ ಗಳು, ಹೈಟೆಕ್‌, ಗೃಹೋಪಯೋಗಿ ವಸ್ತುಗಳ ಮೇಲೆ ನಿರ್ಬಂಧ ಹೇರಿವೆ.

ಪರಿಣಾಮಗಳೇನು?
– ಚಿನ್ನದ ಆಮದು ನಿಷೇಧದಿಂದ ರಷ್ಯಾದ ಪ್ರಮುಖ ಆದಾಯದ ಮೂಲಕ್ಕೇ ಪೆಟ್ಟು ಬಿದ್ದಂತೆ
– ರಷ್ಯಾದ ಚಿನ್ನವು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ
– ಜಾಗತಿಕ ಆರ್ಥಿಕತೆಯಲ್ಲಿ ಮತ್ತೆ ರಷ್ಯಾ ಏಕಾಂಗಿಯಾಗಲಿದೆ
– ರಷ್ಯಾದ ಸಿರಿವಂತರು ದೊಡ್ಡಮಟ್ಟದ ನಷ್ಟ ಅನುಭವಿಸಲಿದ್ದಾರೆ

Advertisement

ಚಿನ್ನದ ಮೇಲಿನ ನಿಷೇಧದಿಂದ ರಷ್ಯಾದ ಕೋಟ್ಯಧಿಪತಿ ಉದ್ಯಮಿಗಳ ಮೇಲೆ ನೇರ ದಾಳಿ ನಡೆಸಿದಂತಾಗುತ್ತದೆ. ಪುತಿನ್‌ನ ಯುದ್ಧ ತಂತ್ರದ ಹೃದಯಕ್ಕೆ ಚೂರಿ ಇರಿದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next