ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆ ತನ್ನ ಸದಸ್ಯರಿಗಾಗಿ ವರ್ಷಂಪ್ರತಿ ಆಯೋಜಿಸುವ ಆಟೋಟ ಸ್ಪರ್ಧೆಯನ್ನು ಈ ಬಾರಿ ಜ.7ರಂದು ವಡಾಲಾದ ಎನ್‌ಕೆಇಎಸ್ ಶೈಕ್ಷಣಿಕ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿತು.
ಮೂರು ವರ್ಷದ ಚಿಣ್ಣರಿಂದ ನೂರರ ಸಮೀಪದ ಹಿರಿಯ ನಾಗರೀಕರ ವರೆಗೂ ಆಯೋಜಿಸಿದ ಕ್ರೀಡಾ ಕೂಟವನ್ನು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿ ಇದರ ಪ್ರಧಾನ ಅರ್ಚಕ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ತ ಮಂಡಳಿ ಸದಸ್ಯರೂ ಆದ ಎಸ್.ಎನ್ ಉಡುಪ ಅವರು ಉದ್ಘಾಟಿಸಿದರು.
ಇಂತಹ ಕ್ರೀಡಾ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾಗಿವೆ. ಇವು ದೇಹಕ್ಕೆ ನವ ಚೈತನ್ಯ ಕೊಡುತ್ತವೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕ್ರೀಡೋತ್ಸವದಲ್ಲಿ ಭಾಗಿ ಆಗುವಂತಾಗಲಿ ಎಂದವರು ಹಾರೈಸಿದರು.
ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ ಮತ್ತು ಶೈಲಿನಿ ರಾವ್, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್ ಹಾಗೂ ಎಸ್.ಎನ್. ಉಡುಪ ಅವರು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್ ಮತ್ತು ಸಂಚಾಲಕಿ ವಿನೋದಿನಿ ರಾವ್ ಅವರ ಮುಂದಾಳತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳು ಜರಗಿದವು. ಶಶಿಧರ್ ರಾವ್ ವಿಜೇತರ ಯಾದಿ ವಾಚಿಸಿದರು. ಗುರುರಾಜ್ ಭಟ್ ಹಾಗೂ ಹರಿದಾಸ್ ಭಟ್ ಆಟೋಟ ಸ್ಪರ್ಧೆ ನಿರ್ವಾಹಿಸಿದರು. ಕಾರ್ಯಕಾರಿ ಸಮಿತಿಯ ಪ್ರಶಾಂತ್ ಹೆರ್ಲೆ, ಉಮೇಶ್ ರಾವ್, ವಿದ್ಯಾ ರಾವ್, ಪ್ರೇಮಾ ರಾವ್, ಸಹನಾ ಪೋತಿ, ಅರ್ಪಿತಾ ಬಂಟ್ವಾಳ, ಶಾಂತಿಲಕ್ಷ್ಮೀ ಉಡುಪ, ಹರಿಶ್ಚಂದ್ರ ರಾವ್, ದಾಮೋದರ್ ಭಟ್, ಸ್ಮಿತಾ ಭಟ್, ಹಾಗೂ ಯುವ ವಿಭಾಗದ ಕಾರ್ಯಕರ್ತರು ಉಪಸ್ಥಿತರಿದ್ದು, ಕ್ರೀಡೆಗೆ ಸಹಕರಿಸಿದರು.
ಚಿತ್ರ, ವರದಿ: ರೊನಿಡಾ ಮುಂಬಯಿ