Advertisement

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

12:35 PM May 15, 2022 | Team Udayavani |

ಮುಂಬಯಿ: ಕರ್ಮಭೂಮಿ ಯಲ್ಲಿ ತುಳು-ಕನ್ನಡಿಗರ ಸಾಂಘಿಕ ಶಕ್ತಿಯ ಕೇಂದ್ರ ಗೋಕುಲವಾಗಿದೆ. ಇಂತಹ ನಂದಾಗೋಕುಲ ಶತಮಾನದ ಶ್ರೇಷ್ಠ ಸಾಧನೆಯಾಗಿದೆ. ಇದು ಸಂಕೀರ್ಣ ಮಾತ್ರವಾಗಿರದೆ ನಿರೀಕ್ಷೆಗೂ ಮೀರಿದ ಪುರಾತನಕ್ಕೆ ಸಾಕ್ಷಿಯಾಗುವ ಭವ್ಯ ಕಟ್ಟಡವಾಗಿದೆ. ಇದು ಸನಾತನ ಧರ್ಮದ ಇತಿಹಾಸದ ಪುಟವನ್ನು ಸೇರುವ ಭವ್ಯ ಮಂದಿರವಾಗಿದೆ. ಬಿಎಸ್‌ಕೆಬಿಎ ಮತ್ತು ಬಂಟರ ಸಂಘವು ಸಮಾನ ವಯಸ್ಕ ಸಂಸ್ಥೆಗಳಾಗಿದ್ದು, ತೃಪ್ತಿದಾಯಕ ಸೇವೆ ನೀಡುವಲ್ಲಿ ಯಶ ಕಂಡಿವೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ತಿಳಿಸಿದರು.

Advertisement

ಸಾಯನ್‌ ಪೂರ್ವದ ಗೋಕುಲ ನೂತನ ಸಭಾಗೃಹದಲ್ಲಿ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ಏಳನೇ ದಿನವಾದ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಪ್ರಧಾನ ಅಭ್ಯಾಗತರಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಅಶೋಕ್‌ ಎಸ್‌. ಸುವರ್ಣ, ಜಿಎಸ್‌ಬಿ ಸೇವಾ ಮಂಡಳಿ ಕಿಂಗ್‌ ಸರ್ಕಲ್‌ ಮುಂಬಯಿ ಸಂಚಾಲಕ ಸತೀಶ್‌ ರಾಮ

ನಾಯಕ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌, ದೇವಾಡಿಗ ಸಂಘ ಮುಂಬಯಿ ಉಪಾಧ್ಯಕ್ಷ ಪ್ರವೀಣ್‌ ಎನ್‌. ದೇವಾಡಿಗ, ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ನ ಅಧ್ಯಕ್ಷ ಸದಾನಂದ ಕೆ. ಆಚಾರ್ಯ ಕಲ್ಯಾಣ್‌ಪುರ ಉಪಸ್ಥಿತರಿದ್ದರು. ಅತಿಥಿಗಳು ಸುರೇಶ್‌ ರಾವ್‌ ಸಾರಥ್ಯದಲ್ಲಿ ಪುನರ್‌ನಿರ್ಮಿತ ಗೋಕುಲದ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದರು.

ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ

Advertisement

ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಕೋಶಾಧಿಕಾರಿ ಸಿಎ ಹರಿದಾಸ ಭಟ್‌ ಉಪಸ್ಥಿತರಿದ್ದರು. ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಗೋಪಾಲಕೃಷ್ಣ ಪಬ್ಲಿಕ್‌

ಟ್ರಸ್ಟ್‌ನ ವಿಶ್ವಸ್ತ ಸದಸ್ಯರಾದ ಎ. ಶ್ರೀನಿವಾಸ ರಾವ್‌, ಬಿ. ರಮಾನಂದ ರಾವ್‌, ಕೃಷ್ಣ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್‌. ರಾವ್‌ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ. ಕುಸುಮಾ ಶ್ರೀನಿವಾಸ್‌, ಮಹಿಳಾ ವಿಭಾಗಾಧ್ಯಕ್ಷೆ ಐ.ಕೆ. ಪ್ರೇಮಾ ಎಸ್‌. ರಾವ್‌ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.

ಶ್ರೀನಿಧಿ ಭಟ್‌ ಪ್ರಾರ್ಥಿಸಿದರು. ಬಿಎಸ್‌ಕೆಬಿ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿದರು. ವಲ್ಲಭ ತಂತ್ರಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಶೈಲಿನಿ ರಾವ್‌ ವಂದಿಸಿದರು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ:

ಬೆಳಗ್ಗೆ ಪವಮಾನ ಹೋಮ, ಪ್ರಯಶ್ಚಿತ್ತ ಹೋಮ, ತತ್ವ ಹೋಮ, ತತ್ವ ಕಲಶಾಭಿಷೇಕ, ಮಹಾಪೂಜೆ, ಸಂಜೆ ಮಂಡಳ ಪೂಜೆ, ಪಂಚ ವಿಂಶಕ್ತಿ ದ್ರವ್ಯಮಿಳಿತ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶ, ಆದಿವಾಸ ಹೋಮ, ಅಂಕುರ ಪೂಜೆ, ಮಹಾಪೂಜೆ ನೆರವೇರಿದವು. ವಿದ್ವಾನ್‌ ವೇ| ಮೂ| ಎಡಪದವು ತೆಂಕುಮನೆ ಬ್ರಹ್ಮಶ್ರೀ ಮುರಳೀಧರ ತಂತ್ರಿ ಪ್ರಧಾನ ಅರ್ಚಕರಾಗಿದ್ದು, ಪುರೋಹಿತರಾದ ವೇ| ಮೂ| ಕೃಷ್ಣರಾಜ ಉಪಾಧ್ಯಾಯ, ವಿದ್ವಾನ್‌ ಧರೆಗುಡ್ಡೆ  ಶ್ರೀನಿವಾಸ ಭಟ್‌, ವಿದ್ವಾನ್‌ ಪಂಜ ಭಾಸ್ಕರ್‌ ಭಟ್‌ ಪೂಜಾವಿಧಿಗಳನ್ನು ನೆರವೇರಿಸಿದರು. ಡಾ| ಸುರೇಶ್‌ ರಾವ್‌ ಮತ್ತು ವಿಜಯಲಕ್ಷ್ಮೀ ಸುರೇಶ್‌ ರಾವ್‌ ದಂಪತಿ ಪೂಜಾವಿಧಿಗಳ ಯಜಮಾನತ್ವ ವಹಿಸಿದ್ದರು. ವಿವಿಧ ಭಜನ ಮಂಡಳಿಗಳ ವತಿಯಿಂದ ಭಜನ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಶ್ರೀ ಕಟೀಲು ಮೇಳದ ಕಲಾವಿದರಿಂದ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.

-ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next