Advertisement
ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ಓರಿಯಂಟಲ್ ನೃತ್ಯಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಇವರು ಅಂದಿನ ರಾಷ್ಟ್ರಪತಿ ಸಂಜೀವ ರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು, ವೀರಪ್ಪ ಎಂ. ಮೊಲಿ ಮತ್ತು ಹಲವಾರು ಮಠಾಧೀಶರಿಂದ ಪುರಸ್ಕೃತರಾಗಿದ್ದಾರೆ. ತನ್ನ 19ನೆ ವಯಸ್ಸಿನಿಂದಲೇ ದೆಹಲಿಯಲ್ಲಿ 11ವರ್ಷಗಳ ತನಕ ನೆಲೆಸಿ ಅಲ್ಲಿಯೂ ತನ್ನ ಕಲಾ ಸೇವೆ ಮಾಡಿದ ಹೆಗ್ಗಳಿಕೆ ಇವರಿಗಿದೆ. ಕಳೆದ 22 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿ, ಶಿಕ್ಷಕಿ, ಸಂಗೀತ-ಭಜನಾ ಗಾಯಕಿಯಾಗಿ, ಸಮಾಜ ಸೇವಕಿಯಾಗಿ, ಉತ್ತಮ ಸಂಘಟಕಿಯಾಗಿ ಪ್ರಸ್ತುತ ನಗರದ ಪ್ರತಿಯೊಂದು ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಇದರ ಸಕ್ರಿಯ ಸದಸ್ಯೆಯಾಗಿದ್ದು, ಹಲವಾರು ವರ್ಷಗಳ ತನಕ ಕಾರ್ಯಕಾರೀ ಸಮಿತಿಯಲ್ಲಿದ್ದುಕೊಂಡು ಗೋಕುಲ ಕಲಾವೃಂದದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಲಾವಿದರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಹಕರಿಸಿದ್ದಾರೆ.
Related Articles
ತಾರಾ ರಾವ್ ಅವರ ಅಗಲುವಿಕೆಗೆ ಅವರ ಅಪಾರ ಸಂಖ್ಯೆಯ ಹಿತೈಷಿಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಬಿಎಸ್‌ಕೆಬಿಎ ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ. ಪೋತಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ತ ಮಂಡಳಿ, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಪೂರ್ವಾಧ್ಯಕ್ಷ ಎಲ್. ವಿ. ಅಮೀನ್, ಭಾರತ್ ಬ್ಯಾಂಕ್‌ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ. ಆರ್. ಕೋಟ್ಯಾನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಎಲ್. ಶೆಟ್ಟಿ, ಮಹಿಳಾ ವಿಭಾಗಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ, ರಾಮರಾಜ ಕ್ಷತಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಎಚ್. ಬಿ. ಎಲ್. ರಾವ್, ಬಿ. ರಮಾನಂದ ರಾವ್, ಕಲೀನ, ಐ. ಕೆ. ಪ್ರೇಮಾ ಎಸ್.ರಾವ್, ಕೃಷ್ಣ ಆಚಾರ್ಯ, ಪೆರ್ಣಂಕಿಲ ಹರಿದಾಸ್ ಭಟ್, ಎಸ್.ಎನ್ ಉಡುಪ, ಕೈರಬೆಟ್ಟು ವಿಶ್ವನಾಥ ಭಟ್, ಪೇಜಾವರ ಮಠ ಮುಂಬಯಿ ಶಾಖೆಯ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಅದಮಾರು ಮಠದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಪಡುಬಿದ್ರಿ, ವಿ. ರಾಜೇಶ್, ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪಂಡಿತ್ ನವೀನ್‌ಚಂದ್ರ ಆರ್. ಸನೀಲ್, ಹಿರಿಯ ಕಲಾವಿದರಾದ ಮೋಹನ್ ಮಾರ್ನಾಡ್, ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್. ಪೂಜಾರಿ, ಕೆ. ಭೋಜರಾಜ್, ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ, ಡಾ| ಸುನೀತಾ ಎಂ. ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಎನ್. ಟಿ. ಪೂಜಾರಿ ಸಂತಾಪ ಸೂಚಿಸಿದ್ದಾರೆ.
Advertisement