ಗೋಕರ್ಣ: ಖ್ಯಾತ ಅಥರ್ವಣವೇದ ಪಂಡಿತರಾಗಿದ್ದ ಗೋಕರ್ಣದ ಆಚಾರ್ಯ ಶ್ರೀಧರ ಅಡಿ ಬುಧವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿ ಸೇರಿ ಅಪಾರ ಶಿಷ್ಯವರ್ಗ, ಬಂಧುಗಳನ್ನು ಅಗಲಿದ್ದಾರೆ.
ವಾರಾಣಸಿಯಲ್ಲಿ ಋಗ್ವೇದ ಮತ್ತು ಯಜುರ್ವೇದ ಅಧ್ಯಯನ ಮುಗಿಸಿ ನಂತರ ಅಥರ್ವಣ ವೇದ ಪಾರಂಗತರಾಗಿ ವಿವಿಧೆಡೆ ವೇದ ಮಹತ್ವ ಸಾರಿ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದ್ದರು.
ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಅವರು ವಾಗ್ಮಿಯೂ ಆಗಿದ್ದರು. ಭಾವತರಂಗಿಣಿ ಸೇರಿದಂತೆ ಸಂಸ್ಕೃತದಲ್ಲಿ ಅನೇಕ ನಾಟಕಗಳನ್ನ ರಚಿಸಿದ್ದರು. ಮಧ್ಯಪ್ರದೇಶ ಸರಕಾರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಉತ್ತರ ಪ್ರದೇಶ ಸರಕಾರ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬರೋಡಾದಲ್ಲಿಯಜ್ಞಕ್ಕೆ ತೆರಳಿದ್ದ ವೇಳೆ ಅನಾರೋಗ್ಯಕ್ಕೆ ಗುರಿಯಾಗಿದ್ದರು.ಶಿಷ್ಯರು ಮಹಾರಾಷ್ಟ್ರದ ನಾಸಿಕ್ ಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು.
Related Articles
ಗುರುವಾರ ಗೋಕರ್ಣದಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಅಂತ್ಯ ಕ್ರಿಯೆ ನಡೆಸುತ್ತೇವೆ ಎಂದು ಎಂದು ಕುಟುಂಬ ತಿಳಿಸಿದೆ.