ಗೋಕರ್ಣ: ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ತೀವ್ರ ಚರ್ಚೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ವೇಳೆಯಲ್ಲೇ ಇತಿಹಾಸ ಪ್ರಸದ್ಧ ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ದೇವರಿಗೆ ನಿತ್ಯವೂ ವಿಶೇಷ ಪೂಜೆ ನಡೆಸುತ್ತಿರುವುದು ಭಾರಿ ಸುದ್ದಿಯಾಗಿದೆ.
3 ಶತಮಾನಗಳಿಂದಲೂ ಟಿಪ್ಪುವಿನ ಹೆಸರಿನಲ್ಲಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು, ಮಹಾಬಲೇಶ್ವರ ದೇವರ ಆತ್ಮಲಿಂಗ,ಪಾರ್ವತಿ ದೇವಿ ಮತ್ತು ಗೌರಿ ಮಂದಿರದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯ ರಾತ್ರಿ ಅರ್ಚಕರು ಪೂಜೆ ನಡೆಸುತ್ತಾರೆ.
ಅರ್ಚಕರು ಮೂರು ಬಾರಿ ಸಲಾಂ,ಸಲಾಂ, ಸಲಾಂ ಎಂದು ಉದ್‌ಘೋಷ ಮಾಡಿ ಬಳಿಕ ಮಂತ್ರೋಚ್ಛಾರ ಮಾಡಿ ಪೂಜೆ ನೆರವೇರಿಸುತ್ತಾರೆ.
ಶಿವ ಶಕ್ತಿಗೆ ಶರಣಾಗಿದ್ದ ಟಿಪ್ಪು
ಗೋಕರ್ಣಕ್ಕೆ ಮುತ್ತಿಗೆ ಹಾಕಿದ್ದ ಟಿಪ್ಪು ಸೈನಿಕರು ದೇವಾಲಯವನ್ನು ವಶಕ್ಕೆ ಪಡೆಯಲು ಮುಂದಾಗ ಟಿಪ್ಪುವಿನ ಕನಸಿನಲ್ಲಿ ಶಿವ ಬಂದು ಶರಣಾಗುವಂತೆ ಸೂಚಿಸಿದ್ದ ಎನ್ನುವ ಪ್ರತೀತಿ ಇದೆ ಎನ್ನಲಾಗಿದೆ.
ಕನಸಿನಲ್ಲಿ ಬಂದ ತಕ್ಷಣ ದೇವಾಲಯಕ್ಕೆ ಬಂದಿದ್ದ ಟಿಪ್ಪು ದೇವರ ಮುಂದೆ ಶರಣಾಗಿ ಸಲಾಂ ವಂದನೆ ಸಲ್ಲಿಸಿ ತಪ್ಪು ಕಾಣಿಕೆ ಸಲ್ಲಿಸಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಿತ್ಯವೂ ಸಲಾಂ ಕರೆಯಲಾಗುತ್ತಿದೆ.