Advertisement
ಹಂಪಿಯ ಕಿಷ್ಕಿಂಧಾ ಪರ್ವತವು ಹನುಮಂತನ ಜನ್ಮಸ್ಥಾನ ಎಂದೇ ನಂಬಲಾಗಿತ್ತು. ಆ ಬಳಿಕ ಆಂಧ್ರ ಪ್ರದೇಶವು ನಮ್ಮ ರಾಜ್ಯವೇ ಹನು ಮಂತನ ಜನ್ಮಭೂಮಿ ಎಂದು ಹೇಳಿಕೊಂಡಿತ್ತು. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್ ಹನು ಮಂತನ ಜನ್ಮಸ್ಥಳ ಎಂದು ಅಲ್ಲಿನ ಕೆಲವರು ಹೇಳಿದ್ದು, ಈಗ ಆ ಸಾಲಿಗೆ ಗೋಕರ್ಣವೂ ಸೇರಿದೆ.
Related Articles
ಸೀತಾಮಾತೆಯನ್ನು ಪ್ರಥಮ ಬಾರಿ ಆಂಜನೇಯ ನೋಡಿದಾಗ ತನ್ನ ಗುರುತು ಹೇಳುತ್ತ, ವೈದೇಹಿ, ಮಾಲ್ಯವಂತವು ಪರ್ವತಗಳಲ್ಲಿಯೇ ಶ್ರೇಷ್ಠವಾದ ಪರ್ವತ. ಕೇಸರಿ ಎಂಬ ಕಪೀಶ್ವರನು ಅಲ್ಲಿಂದ ಗೋಕರ್ಣ ಪರ್ವತಕ್ಕೆ ಹೋದನು. ಪುಣ್ಯಪ್ರದ ವಾದ ಗೋಕರ್ಣ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದ ಶಂಬಸಾದನ ಎಂಬ ರಾಕ್ಷಸನನ್ನು ಸಂಹರಿಸುವಂತೆ ಬ್ರಹ್ಮರ್ಷಿಗಳು ಕಪಿಶ್ರೇಷ್ಠನಾದ ನನ್ನ ತಂದೆಗೆ ಆಜ್ಞೆ ಮಾಡಿದರು. ಅವರ ಆಜ್ಞೆಯಂತೆ ನನ್ನ ತಂದೆಯು ಆ ರಾಕ್ಷಸನನ್ನು ಸಂಹರಿಸಿದನು. ಅಂತಹ ಪರಾಕ್ರಮಿಯಾದ ಕೇಸರಿಯ ಕ್ಷೇತ್ರದಲ್ಲಿ (ಅವನ ಪತ್ನಿ ಅಂಜನಾದೇವಿಯಲ್ಲಿ) ನಾನು ವಾಯುವಿನಿಂದ ಹುಟ್ಟಿದೆ. ನನ್ನ ಪರಾಕ್ರಮದಿಂದಲೇ ನಾನು ಲೋಕದಲ್ಲಿ ಹನುಮಂತ ಹೆಸರಿ ನಿಂದ ಖ್ಯಾತನಾಗಿದ್ದೇನೆ ಎಂದು ಸೀತೆಗೆ ಆಂಜನೇಯ ಪರಿಚಯಿಸಿ ಕೊಳ್ಳುತ್ತಾನೆ. (ತಸ್ಯಾಹಂ ಹರಿಣಃ ಕ್ಷೇತ್ರೇ ಜಾತೋ ವಾತೇನ ಮೈಥಿಲಿ ಹನುಮಾನಿತಿ ನಿಖ್ಯಾತೋ ಲೋಕೇ ಸ್ವೇನೈವ ಕರ್ಮಣಾ) ಮೂಲ ವಾಲ್ಮೀಕಿ ರಾಮಾಯಣದ ಸುಂದರ ಕಾಂಡದ 1304ನೇ ಪುಟದ 81ನೇ ಶ್ಲೋಕದಲ್ಲಿ ಮತ್ತು ಕನ್ನಡ ಅನು ವಾದದ 2274ನೇ ಪುಟದಲ್ಲಿ ಇದು ದಾಖಲಾಗಿದೆ. ಹೀಗಿರುವಾಗ ಆಂಜ ನೇಯ ಜನ್ಮಭೂಮಿಗೆ ಸಂಬಂಧಿಸಿದ ದಾಖಲೆ ಕೇಳುವ ಅಗತ್ಯವೇ ಇಲ್ಲ ಎನ್ನುವ ವಾದ ಆರಂಭವಾಗಿದೆ.
Advertisement
-ಜೀಯು