ಮಲ್ಪೆ: ಸಿಆರ್‌ಝಡ್ ನಿಯಮಾವಳಿಯಲ್ಲಿನ ಸಮಸ್ಯೆಯಿಂದಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮುದ್ರ ತೀರದ ಕೊಳ ಮತ್ತು ಪಡುಕರೆಯಲ್ಲಿ ವಾಸವಾಗಿದ್ದ ಕುಟುಂಬಗಳಿಗೆ ಕೊನೆಗೂ ಹಕ್ಕು ಪತ್ರ ದೊರೆತಿದೆ. ಇದು ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.ಈ ಪ್ರದೇಶದಲ್ಲಿ ಮೀನುಗಾರರ ಕುಟುಂಬಗಳು ಮನೆ ಕಟ್ಟಿಕೊಂಡು ವಾಸ್ತವ್ಯವಿದ್ದರು. ಹಕ್ಕುಪತ್ರ ಇಲ್ಲದೆ ಪ್ರತಿಯೊಂದಕ್ಕೂ ಸಮಸ್ಯೆ ಎದುರಾಗುತ್ತಿತ್ತು.
Advertisement
ಖಾಯಂ ನಿವೇಶನ ಹಕ್ಕುಪತ್ರ ನೀಡುವಲ್ಲಿ 57 ಎಕ್ರೆ ಪ್ರದೇಶವು ದಾಖಲೆಯಲ್ಲಿ ಸಮುದ್ರ ಎಂದು ನಮೂದಾಗಿದ್ದು ಸಮಸ್ಯೆಯಾಗಿತ್ತು. ಆ ಸಮಸ್ಯೆ ಬಗೆಹರಿದು ಅರ್ಹ ನಿವಾಸಿಗಳಿಗೆ ಖಾಯಂ ನಿವೇಶನ ಹಕ್ಕು ಪತ್ರವನ್ನು ವಿತರಿಸಲಾಗಿದೆ.