Advertisement

ಗೋಲಿ ಧೀರಜ್‌ ಮೇಲೆ ಈಗ ಯೂರೋಪ್‌ ಫ‌ುಟ್‌ಬಾಲ್‌ ಕ್ಲಬ್‌ ಕಣ್ಣು

07:30 AM Oct 15, 2017 | Team Udayavani |

ನವದೆಹಲಿ: ಫಿಫಾ 17 ವರ್ಷ ವಯೋಮಿತಿಯೊಳಗಿನ ಫ‌ುಟ್‌ಬಾಲ್‌ ಕೂಟದಲ್ಲಿ ಭಾರತ ಸೋಲು ಕಂಡು ಕೂಟದಿಂದ ಹೊರಬಿದ್ದಿರಬಹುದು. ಆದರೆ ಒಂದಿಷ್ಟು ಆಟಗಾರರು ಮೊದಲ ಪ್ರಯತ್ನದಲ್ಲಿ ಮಿಂಚಿದ್ದಾರೆ ಎನ್ನುವುದು ಅಕ್ಷರಶಃ ನಿಜ. ಅಂಥಹವರಲ್ಲಿ ಭಾರತ ತಂಡದ ಗೋಲ್‌ಕೀಪರ್‌ ಧೀರಜ್‌ ಮೋಯಿರಾಂಗೆಮ್‌ ಪ್ರಮುಖರು. ಧೀರಜ್‌ಗೆ ಈಗ ಎಲ್ಲಿಲ್ಲದ ಬೇಡಿಕೆ. ಇವರನ್ನು ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲು ಯೂರೋಪ್‌ನ ಖ್ಯಾತ ಕ್ಲಬ್‌ ತಂಡಗಳು ತುದಿಗಾಲಲ್ಲಿ. ಸ್ವತಃ ಈ ವಿಷಯವನ್ನು ಫೋರ್ಚುಗೀಸ್‌ ಗೋಲ್‌ಕೀಪಿಂಗ್‌ ಕೋಚ್‌ ಪೌಲೋ ತಿಳಿಸಿದ್ದಾರೆ.

Advertisement

ಧೀರಜ್‌ ವಿಶ್ವ ಕೂಟದಲ್ಲಿ ತೋರಿದ ಧೀರ ಪ್ರದರ್ಶನ. ಲೀಗ್‌ ಹಂತದ ಮೂರು ಪಂದ್ಯಗಳಲ್ಲಿ ಅವರು 15ಕ್ಕೂ ಹೆಚ್ಚು ಎದುರಾಳಿಗಳು ಗೋಲಿಗಾಗಿ ನಡೆಸಿದ ಪ್ರಯತ್ನವನ್ನು ಭಗ್ನಗೊಳಿಸಿದ್ದು. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದು ಕ್ಲಬ್‌ ತಂಡಗಳು ಇವರತ್ತ ಚಿತ್ತ ಹರಿಸಲು  ಇದು ಪ್ರಮುಖ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next