Advertisement

ಕ್ಷೇತ್ರ ಅಭಿವೃದ್ದಿಯೇ ಗುರಿ: ಶಾಸಕ ಗುತ್ತೇದಾರ

03:25 PM Jan 10, 2022 | Team Udayavani |

ಆಳಂದ: ಕ್ಷೇತ್ರದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ, ಕಟ್ಟಡ ಸೇರಿದಂತೆ ಮೂಲ ಸೌಲಭ್ಯ ಒದಗಿಸುವುದೇ ತಮ್ಮ ಮುಖ್ಯ ಗುರಿಯಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಹಿರೋಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ 30 ಲಕ್ಷ ರೂ. ವೆಚ್ಚದ ಪ್ರಾಥಮಿಕ ಶಾಲೆಯ ಸುತ್ತುಗೋಡೆ, 10 ಲಕ್ಷ ರೂ. ವೆಚ್ಚದಲ್ಲಿ ಶವಾಗಾರ, 19 ಲಕ್ಷ ರೂ. ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಸ ವಿಲೇವಾರಿ ಘಟಕ ಸೇರಿದಂತೆ ಒಟ್ಟು 70 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ನೀಡಲಾಗಿದ್ದು, ಇದರಡಿ ಕಾಮಗಾರಿ ಕೈಗೊಳ್ಳಲಾಗಿದೆ. ಹಿರೋಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.

ಬಿಜೆಪಿ ಯುವ ಮುಖಂಡ ಸಿದ್ಧು ಪಾಟೀಲ ಹಿರೋಳಿ, ಗ್ರಾಪಂ ಸದಸ್ಯ ಕಾಶಿನಾಥ ಎಸ್‌. ವಾಡೇದ್‌, ಗುರು ಉಡಗಿ, ಪ್ರದೀಪ ಶಿಂಧೆ, ಪಿಡಿಒ ರಾಮದಾಸ್‌, ಕಿರಿಯ ಅಭಿಯಂತರ ಶರಣಯ್ಯ ಹಿರೇಮಠ, ಶರಣಬಸಪ್ಪ ಡಮ್ಮ, ವೈಜನಾಥ ಪಾಟೀಲ, ಶಿವಲಿಂಗಪ್ಪ ಗಡ್ಡದ, ಶಿವಶರಣಪ್ಪ ಚೌಡೇಶ್ವರ ಮತ್ತಿತರರು ಇದ್ದರು.

ಸಾಲೇಗಾಂವ ರಸ್ತೆ ಕಾಮಗಾರಿ ಆರಂಭ

Advertisement

ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಸಿಮೆಂಟ್‌ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಚಾಲನೆ ನೀಡಿದರು. ಮಲ್ಲಿನಾಥ ಘಂಟೆ, ಶೇಖರ ವಾಡೆ, ಲಾಡಪ್ಪ ಬ್ಯಾಳೆ, ಮಹಿಬೂಬ ತೆಲಾಕುಣಿ, ಲೋಕೋಪಯೋಗಿ ಇಂಜಿನಿಯರ್‌ ಶರಣಯ್ಯ ಹಿರೇಮಠ ಇದ್ದರು.

ತೆಲಾಕುಣಿ ಗ್ರಾಮದಲ್ಲೂ ಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಸಿಮೆಂಟ್‌ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು. ಚಂದ್ರಶೇಖರಯ್ಯ ಹಿರೇಮಠ, ಗುರುಲಿಂಗಯ್ಯ ಸ್ವಾಮಿ, ಲಲಿತಾ ಮೋರೆ, ಸುರೇಶ, ಸುಭಾಷ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next