Advertisement

‘ಬದುಕಿನ ಯಶಸ್ಸಿಗೆ ನಿಖರ ಗುರಿ ಅಗತ್ಯ’

12:38 PM Aug 26, 2018 | Team Udayavani |

ಮೂಡಬಿದಿರೆ: ಬದುಕಿನ ಗೆಲುವು ಸಾಧ್ಯವಾಗುವುದು ಸಾಧನೆಗಳಿಂದ. ಕೇವಲ ಅಧಿಕಾರ ಮತ್ತು ಶ್ರೀಮಂತಿಕೆಯಿಂದ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಖರವಾದ ಗುರಿ ಮತ್ತು ಪ್ರಖರ ವಿಶ್ವಾಸ ಇದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಮಂಗಳೂರಿನ ಆಡಿಶನಲ್‌ ಡೆಪ್ಯುಟಿ ಕಮಿಷನರ್‌ ಕುಮಾರ್‌ ಹೇಳಿದರು. ಆಳ್ವಾಸ್‌ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ನಡೆದ ಮಾನವಿಕ ವಿಭಾಗದ ಉದ್ಯೋಗ ತರಬೇತಿ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿದ್ಯಾರ್ಥಿ ಜೀವನ ಅಮೂಲ್ಯವಾದ ಕಾರಣ ಪ್ರತಿಯೊಬ್ಬರೂ ಭವಿಷ್ಯದ ಗುರಿಯನ್ನಿರಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವತ್ತ ಶ್ರಮಿಸಬೇಕು. ನಮ್ಮ ಜೀವನ ಯಾವುದಕ್ಕೂ ಉಪಯೋಗಕ್ಕೆ ಬಾರದ ಕಾಡುಮಲ್ಲಿಗೆಯಂತಾಗದೆ, ಎಲ್ಲರೂ ಉಪಯೋಗಿಸುವ ನಾಡಿನ ಮಲ್ಲಿಗೆಯಂತಾಗಬೇಕು ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು, ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆಯ ಪಥದಲ್ಲಿ ಮುಂದುವರಿಯಬೇಕು ಎಂದು ಹೇಳಿದರು. 

ಕಲಾ ವಿಭಾಗದ ವಾರ್ಷಿಕ ವಿಮರ್ಶಾ ವರದಿಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾನವಿಕ ವಿಭಾಗದ ಡೀನ್‌ ಸಂಧ್ಯಾ ಕೆ.ಎಸ್‌. ಉಪಸ್ಥಿತರಿದ್ದರು. ಅಭಿಷೇಕ್‌ ಸ್ವಾಗತಿಸಿ, ಅಭಿನಂದನ್‌ ವಂದಿಸಿದರು. ಚೈತಾಲಿ ರೈ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next