Advertisement

ಉತ್ತಮ ಸಮಾಜ ನಿರ್ಮಾಣಕ್ಕೆ ಗುರಿ, ಛಲ ಇಟ್ಟುಕೊಳ್ಳಿ

07:33 AM Feb 15, 2019 | |

ಹುಣಸೂರು: ವಿದ್ಯಾರ್ಥಿಗಳು ಗುರಿ ಮತ್ತು ಛಲ ಇಟ್ಟುಕೊಂಡು ಉತ್ತಮ ಸಮಾಜ ನಿರ್ಮಿಸಬೇಕು ಎಂದು ಮೈಸೂರು ವಿವಿಯ ಇಂದಿರಾಗಾಂಧಿ ಪ್ರಶಸ್ತಿ ಪುರಸ್ಕೃತ, ವಿಶ್ರಾಂತ ಪ್ರಾಂಶುಪಾಲ ಡಾ.ಕಾಳಚನ್ನೇಗೌಡ ಸಲಹೆ ನೀಡಿದರು.

Advertisement

ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಡಿ.ಡಿ. ಅರಸು ಪ್ರಥಮ ದರ್ಜೆ ಕಾಲೇಜಿಂದ ಆಯೋಜಿಸಿದ್ದ ಎನ್‌ಎಸ್‌ಎಸ್‌ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್‌ ಎಂದರೆ ಕೇವಲ ಶ್ರಮದಾನ ಮಾಡುವುದಕ್ಕಷ್ಟೇ ಸೀಮಿತವಾಗಬಾರದು, ಬದಲಿಗೆ ಉನ್ನತ ಶಿಕ್ಷಣದ ಬಗ್ಗೆ ಹಾಗೂ ಜೀವನ ರೂಪಿಸಿಕೊಳ್ಳುವ ಬಗ್ಗೆ ಕನಸು ಕಾಣಬೇಕು ಎಂದು ಹೇಳಿದರು.

ಸನ್ನಡತೆ ಮತ್ತು ಮೌಲ್ಯಧಾರಿತ ಶಿಕ್ಷಣ ಮೈಗೂಡಿಸಿಕೊಂಡು ಅವಕಾಶಗಳು ಸಿಕ್ಕಾಗ ಬಳಸಿಕೊಂಡು ಅಂಕಗಳ ಪರೀಕ್ಷೆಗಿಂತ ಜೀವನದ ಪರೀಕ್ಷೆ ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುತ್ತಿವೆ.

ಆದರೆ, ನೈಜ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ತಲುಪದೆ ಹಳ್ಳ ಹಿಡಿಯುತ್ತಿವೆ. ಹಾಗಾಗಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಹಾಗೂ ಸ್ವತ್ಛತೆ, ಪರಿಸರ ಕಾಪಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಶಿಬಿರಾರ್ಥಿಗಳು ಹೆಚ್ಚು ಅರಿಯಬೇಕು ಎಂದರು.

Advertisement

ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್‌ ಮಾತನಾಡಿ, ಪದವಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ, ವೃತ್ತಿಯನ್ನು ಆರಂಭಿಸಿದಾಗ ಉತ್ತಮ ನಡತೆ, ಸಮಯಪಾಲನೆ, ಶಿಸ್ತು, ಸೇವಾಗುಣ ಬೆಳೆಸಿಕೊಂಡರೆ ಮಾತ್ರ ಬದುಕಿನ ಯಶಸ್ವಿ ಪಯಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್‌ ಮಾತನಾಡಿದರು. ತಾಪಂ ಸದಸ್ಯ ತಟ್ಟಕೆರೆ ಶ್ರೀನಿವಾಸ್‌, ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ.ಕಿರಣ್‌ಕುಮಾರ್‌, ಡಾ.ವಿಜಯಲಕ್ಷ್ಮೀ, ವಿಎಸ್‌ಎಸ್‌ಎನ್‌ ಅಧ್ಯಕ್ಷ ದೇವರಾಜು, ಗ್ರಾಮದ ಮುಖಂಡರಾದ ವೀರಭದ್ರ, ಗ್ರಾಪಂ ಸದಸ್ಯ ಲಕ್ಷ್ಮಣಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next