ಪಣಜಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೋವಾಕ್ಕೆ ಮುಂದಿನ ಆರು ತಿಂಗಳು ನಿರ್ಣಾಯಕ. ಈ ವರ್ಷದ ಪ್ರವಾಸೋದ್ಯಮವು ನಿಜವಾಗಿಯೂ ಉತ್ತಮವಾಗಿರುತ್ತದೆ. ಎರಡು ವರ್ಷಗಳ ಕೋವಿಡ್ ನಂತರ, ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಇದಲ್ಲದೆ, ಗೋವಾ ಸಮುದ್ರ ಪ್ರವಾಸೋದ್ಯಮದ ಲಾಭವನ್ನೂ ಪಡೆಯಲಿದೆ ಮತ್ತು ಪ್ರಸಕ್ತ ವರ್ಷ ಸುಮಾರು 60 ಕ್ರೂಸ್ ಪ್ರವಾಸಿ ಹಡಗುಗಳು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ಪ್ರವಾಸೋದ್ಯಮ ಋತುಗಳು ವ್ಯರ್ಥವಾಯಿತು ಮತ್ತು ವಿದೇಶಿ ಪ್ರವಾಸಿಗರು ಬರಲಿಲ್ಲ. ಅದಕ್ಕಾಗಿ ಈ ಸೀಸನ್ ಪ್ರವಾಸೋದ್ಯಮಕ್ಕೆ ಮಹತ್ವದ್ದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಮುದ್ರ ಪ್ರವಾಸೋದ್ಯಮ ಬಂದ್ ಆದ ಕಾರಣ ರಾಜ್ಯಕ್ಕೆ ಯಾವುದೇ ಪ್ರವಾಸಿ ಹಡಗು ಬಂದಿರಲಿಲ್ಲ. ರಾಜ್ಯದಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗೋವಾಕ್ಕೆ ಗುಣಮಟ್ಟದ ಪ್ರವಾಸೋದ್ಯಮ ಒದಗಿಸಲು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ರಮಿಸುತ್ತಿದ್ದಾರೆ.
ಪ್ರವಾಸೋದ್ಯಮ ಮಂಡಳಿಯ ಸಹಾಯದಿಂದ ಮತ್ತು ಪ್ರವಾಸೋದ್ಯಮದ ಅಂಶಗಳೊಂದಿಗೆ ಈ ಋತುವನ್ನು ನಿರ್ಧರಿಸಲಾಗುವುದು ಎಂದು ಸಚಿವ ರೋಹನ್ ಖಂವಟೆ ಭರವಸೆ ವ್ಯಕ್ತಪಡಿಸಿದರು.
ಪ್ರವಾಸಿಗರು ಗೋವಾಕ್ಕೆ ಬರುವುದು ಅದರ ಸೌಂದರ್ಯದಿಂದ ಮಾತ್ರವಲ್ಲ, ದೇಶದ ಭೋಜನದ ರಾಜಧಾನಿ ಎಂದೇ ಗೋವಾ ಪ್ರಸಿದ್ಧಿಯಾಗಿದೆ. ಇಂದು, ಆಹಾರ ಬ್ಲಾಗರ್‍ಗಳು ಮತ್ತು ಮಾಧ್ಯಮದ ವ್ಯಕ್ತಿಗಳು ಅದರ ಪಾಕಪದ್ಧತಿಯನ್ನು ಪ್ರದರ್ಶಿಸಲು ಗೋವಾಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ರಾಜ್ಯಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ ಎಂದು ಸಚಿವ ರೋಹನ್ ಖಂವಟೆ ಹೇಳಿದರು.
ಇದನ್ನೂ ಓದಿ: ರೌಡಿಶೀಟರ್ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ