Advertisement
ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಹದಾಯಿ ಯೋಜನೆ ಜಾರಿಗಾಗಿ ನವಲಗುಂದದಲ್ಲಿ ಕಳೆದ 2 ವರ್ಷಗಳಿಂದ ರೈತರು ಹೋರಾಟ ಮಾಡುತ್ತಿರುವುದು ರಾಜ್ಯದಲ್ಲೇ ಐತಿಹಾಸಿಕವಾಗಿದೆ. ಆದರೂ ಸರ್ಕಾರ ನಿರ್ಲಕ್ಷé ತೋರುತ್ತಿದೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹಾಗೂ ರೈತರಿಗೆ, ಹೋರಾಟಗಾರರಿಗೆ ಕನ್ನಡಪರ ಸಂಘಟನೆಗಳು ಪಾಲ್ಗೊಂಡು ದೊಡ್ಡ ಶಕ್ತಿ ನೀಡಲಿವೆ. ಹಂತ ಹಂತವಾಗಿ ತೀವ್ರ ಸ್ವರೂಪದ ಹೋರಾಟ, ಚಳವಳಿ ಆಯೋಜಿಸಲಾಗುವುದು. ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಮಹದಾಯಿ ಹೋರಾಟವನ್ನು ರಾಜ್ಯವ್ಯಾಪಿ ಕೈಗೊಳ್ಳಲಾಗುವುದು ಎಂದರು. ಗೋವಾ ಮುತ್ತಿಗೆ ಹೋರಾಟದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. Advertisement
ಮಹದಾಯಿಗಾಗಿ ಸೆ.22ಕ್ಕೆ ಗೋವಾ ಮುತ್ತಿಗೆ: ವಾಟಾಳ್
07:05 AM Sep 14, 2017 | |
Advertisement
Udayavani is now on Telegram. Click here to join our channel and stay updated with the latest news.