Advertisement

Goa; ಕರಾವಳಿಯಲ್ಲಿ ದಸರಾ ರಜೆ ವೇಳೆ ವಿದೇಶಿ ಮಹಿಳೆ ಸೇರಿ 27 ಜನರ ರಕ್ಷಣೆ

05:33 PM Oct 26, 2023 | Team Udayavani |

ಪಣಜಿ: ದಸರಾ ರಜಾದಿನಗಳಲ್ಲಿ, ಗೋವಾ ಕರಾವಳಿಯಲ್ಲಿ ದೃಷ್ಟಿ ಮರೈನ್ ಜೀವರಕ್ಷಕ ದಳದ ರಕ್ಷಣಾ ಕಾರ್ಯಾಚರಣೆಯಲ್ಲಿ 27 ಜನರನ್ನು ರಕ್ಷಿಸಲಾಗಿದೆ. ದೂಧ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 11 ತಿಂಗಳ ಹೆಣ್ಣು ಮಗು ಮತ್ತು ಆಕೆಯ ತಾಯಿಯನ್ನು ರಕ್ಷಿಸಲಾಗಿದ್ದು, ಮಾಂದ್ರೆ ಬೀಚ್‍ನಲ್ಲಿ ರಷ್ಯಾದ ಮಹಿಳೆಯನ್ನು ರಕ್ಷಿಸಿರುವುದಾಗಿ ದೃಷ್ಠಿ ಜೀವರಕ್ಷಕ ದಳ ಮಾಹಿತಿ ನೀಡಿದೆ.

Advertisement

ದೂಧ್‍ಸಾಗರ್ ಜಲಪಾತದಲ್ಲಿ ಜಾರಿಬಿದ್ದು ಮುಳುಗುತ್ತಿದ್ದ ಕೋಲ್ಕತ್ತಾದ ಇಬ್ಬರನ್ನು ಜೀವರಕ್ಷಕರು ರಕ್ಷಿಸಿದ್ದಾರೆ. 55 ವರ್ಷದ ರಷ್ಯಾದ ಮಹಿಳೆಯನ್ನು ಮಾಂದ್ರೆ ಬೀಚ್‍ನಲ್ಲಿ ಬಲವಾದ ಪ್ರವಾಹದಿಂದ ಆಳ ಸಮುದ್ರಕ್ಕೆ ತೆರಳಿದ್ದವರನ್ನು ರಕ್ಷಿಸಲಾಗಿದೆ. ದೃಷ್ಟಿ ಸಾಗರಿ ಜೀವರಕ್ಷಕ ಸಖಾರಾಮ್ ಬಾಂದೇಕರ್ ಸರ್ಫ್ ಬೋರ್ಡ್ ಸಹಾಯದಿಂದ ಸಂತ್ರಸ್ತೆಯನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದರು.

ಅಲ್ಲದೆ, ಮಾಂದ್ರೆ ಸಮುದ್ರದಲ್ಲಿ ಮುಳುಗುತ್ತಿದ್ದ ಗೋವಾದ 29 ವರ್ಷದ ಇಬ್ಬರು ಯುವಕರನ್ನು ರಕ್ಷಿಸಲಾಗಿದೆ, ಇಬ್ಬರು ಅಲೆಗಳಿಗೆ ಸಿಕ್ಕಿಬಿದ್ದ ನಂತರ, ಜೀವರಕ್ಷಕರಾದ ನಾಗೇಶ್ ಬರ್ಗೆ ಮತ್ತು ನೂತನ್ ಮೋಟೆ ನೀರಿಗೆ ಧುಮುಕಿ, ಸಹಾಯದೊಂದಿಗೆ ದಡಕ್ಕೆ ಕರೆತಂದರು ಎಂದು ದೃಷ್ಠಿ ಜೀವರಕ್ಷಕ ದಳ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next