ಪಣಜಿ: ಗೋವಾ ರಾಜ್ಯದ ಕೆಫೆಮ್‍ನ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳವು ಒಂದೇ ದಿನದಲ್ಲಿ 100,000 ಲಾಟರಿ ಕೂಪನ್‍ಗಳನ್ನು ಮಾರಾಟ ಮಾಡಿ ರಾಜ್ಯದಲ್ಲಿ ದಾಖಲೆ ನಿರ್ಮಿಸಿದೆ. ಸೋಮವಾರ ಬೆಳಗ್ಗೆಯಿಂದಲೇ ಲಾಟರಿ ಕೂಪನ್‍ಗಳಿಗೆ ಸಾವಿರಾರು ಜನರು ಮುಗಿಬಿದ್ದರು. ಭಾನುವಾರ (ಆ 27ರಂದು) ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕೂಪನ್ ಮಾರಾಟವನ್ನು ರದ್ದುಗೊಳಿಸಲಾಯಿತು.
ಪ್ರತಿ ವರ್ಷ, ಕೆಫೆಮ್ ಗಣೇಶ ಉತ್ಸವ ಮಂಡಲವು ಆಕರ್ಷಕ ಬಹುಮಾನಗಳನ್ನು ಇಡುತ್ತದೆ ಮತ್ತು ಈ ವರ್ಷವೂ ಸುಮಾರು ಎರಡೂವರೆ ಕೋಟಿ ರೂಗಳ ಬಹುಮಾನಗಳನ್ನು ಗಣೇಶೋತ್ಸವ ಮಂಡಳವು ನೀಡುತ್ತಿದೆ. 10 ಐಷಾರಾಮಿ ಕಾರುಗಳು ಮತ್ತು 10 ದ್ವಿಚಕ್ರ ವಾಹನಗಳನ್ನು ಬಹುಮಾನವಾಗಿ ಇರಿಸಿದೆ. ವಾಹನಗಳನ್ನು ರಸ್ತೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಇತರೆ ವೆಚ್ಚಗಳಿಗೆ ವಾಹನಗಳ ಜತೆಗೆ ನಗದು ನೀಡಲಾಗುವುದು ಎಂದು ಗಣೇಶೋತ್ಸವ ಮಂಡಳ ಹೇಳಿದೆ.
ಆ. 27 ರಂದು ಕೆಫೆಮ್ ಬಜಾರ್ ನಲ್ಲಿರುವ ಮುನ್ಸಿಪಲ್ ಪಾರ್ಕ್‍ನಲ್ಲಿ ಜನಸಂದಣಿಗೆ ಹೆದರಿ ಲಾಟರಿ ಕೂಪನ್ ಮಾರಾಟವನ್ನು ನಿಲ್ಲಿಸಲಾಗಿತ್ತು. ಟಿಕೆಟ್ ಖರೀದಿಗೆ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದರು.
ಪ್ರತಿ ವರ್ಷದಂತೆ, ಗಣೇಶೋತ್ಸವ ಮಂಡಳಿಯ ಮೇಲಿನ ನಂಬಿಕೆಗಾಗಿ ಮತ್ತು ಲಾಟರಿ ಕೂಪನ್‍ಗಳನ್ನು ಖರೀದಿಸುವ ಮೂಲಕ ಮಂಡಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಗಣೇಶೋತ್ಸವ ಮಂಡಳಿ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ಈ ವರ್ಷ ಮಂಡಳವು ಆಕರ್ಷಕ ಗಣಪತಿ ಪ್ರದರ್ಶನ ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಗಣೇಶೊತ್ಸವ ಮಂಡಳಿ ಹೇಳಿದೆ. “ಸರದಿಯಲ್ಲಿದ್ದ ಎಲ್ಲರಿಗೂ ಲಾಟರಿ ಕೂಪನ್‍ಗಳನ್ನು ನೀಡಲು ನಾವು ಪ್ರಯತ್ನಿಸಿದ್ದೇವೆ ಮತ್ತು ನಾವು ಯಶಸ್ವಿಯಾಗಿದ್ದೇವೆ.
ಜನಸಂದಣಿಯಿಂದಾಗಿ ನಾವು ಸಾಕಷ್ಟು ಒತ್ತಡದಲ್ಲಿದ್ದೆವು, ಆದರೆ ನಾವು ಎಲ್ಲರಿಗೂ ಕನಿಷ್ಠ ಎರಡು ಕೂಪನ್‍ಗಳನ್ನು ನೀಡಿದ್ದೇವೆ ಎಂದು ಕೆಫೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ಇಜಿತ್ ಫಳದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.