Advertisement

Aarti Hamal: ನಾಪತ್ತೆಯಾಗಿದ್ದ ನೇಪಾಳ ಮೇಯರ್ ಪುತ್ರಿಯನ್ನು ಪತ್ತೆ ಹಚ್ಚಿದ ಗೋವಾ ಪೊಲೀಸರು

06:13 PM Mar 27, 2024 | Team Udayavani |

ಪಣಜಿ: ನೇಪಾಳದ ದನಗಾದಿಯ ಮೇಯರ್ ಗೋಪಾಲ್ ಹಮಾಲ್ ಅವರ ಪುತ್ರಿ ಆರತಿ ನಾಪತ್ತೆಯಾಗಿರುವ ಬಗ್ಗೆ ಮಂಗಳವಾರ ಗೋವಾದ ಮಾಂದ್ರೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರನ್ನು ಸ್ವೀಕರಿಸಿದ ಪೊಲೀಸರು ಆರತಿಗಾಗಿ ಹುಡುಕಾಟ ನಡೆಸಿದ್ದು, ಶಿವಲಿಯಲ್ಲಿರುವ ಕ್ಷೇಮ ಕೇಂದ್ರದಲ್ಲಿ ಪತ್ತೆಯಾಗಿದ್ದಾರೆ. ಆರತಿ ಕಣ್ಮರೆಯಾಗುವ ಮೊದಲು, ಅಪಹರಣ ಮತ್ತು ಆಕೆಯ ತಂದೆಯ ರಾಜಕೀಯ ಹಿನ್ನೆಲೆಯಂತಹ ವಿಷಯಗಳು ಬಂದವು. ಈ ಬಗ್ಗೆ ಗೋವಾ ಪೊಲೀಸರು ಎಲ್ಲಾ ಬಹಿರಂಗಪಡಿಸಿದ್ದಾರೆ.

Advertisement

ಆರತಿ ಹಮಾಲ್ ನಾಪತ್ತೆಯಾಗುವ ಮೊದಲು ಮಾಂದ್ರೆಯ ಕ್ಷೇಮ ಕೇಂದ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ದಾಖಲಾದ ನಂತರ, ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆವರಣದಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು ಮತ್ತು ಬೀಚ್‍ಗಳಲ್ಲಿ ಅವಳನ್ನು ಹುಡುಕಿದರು. ತನಿಖೆಯ ನಂತರ ಶಿವೋಲಿಯಲ್ಲಿ ಆರತಿ ಪತ್ತೆಯಾಗಿದ್ದಾಳೆ. ಹೊರಗೆ ಹೋದಾಗ ಆರತಿ ತನ್ನ ಮೊಬೈಲ್ ಅನ್ನು ಕ್ಷೇಮ ಕೇಂದ್ರದಲ್ಲಿ ಇರಿಸಿದ್ದಳು. ಆಕೆ ಮತ್ತೊಂದು ರೆಸಾರ್ಟ್‍ನಲ್ಲಿ ಪತ್ತೆಯಾಗಿದ್ದು, ಆಕೆ ಆರೋಗ್ಯವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಅಗತ್ಯ ವೈದ್ಯಕೀಯ ನೆರವು ಕೂಡ ನೀಡಲಾಗಿದೆ.

ಆರತಿ ನಾಪತ್ತೆ ಹಿಂದೆ ಯಾವುದೇ ಅಪಹರಣ ನಡೆದಿಲ್ಲ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಸ್ಪಷ್ಟಪಡಿಸಿದ್ದಾರೆ. ಆರತಿ ತನ್ನ ಮೊಬೈಲ್ ಫೋನ್ ತೆಗೆದುಕೊಳ್ಳದೆ ತಾನಾಗಿಯೇ ಬೇರೆ ಕೇಂದ್ರಕ್ಕೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‍ಜಿಒ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಹೇಳಿದ್ದಾರೆ.

ನೇಪಾಳದ ದನಗಾಧಿಯ ಮೇಯರ್ ಆರತಿ ಎಂಬ ವದಂತಿ ಹರಡುತ್ತಿದೆ. ಆರತಿ ನಾಪತ್ತೆ ದೂರು ಸ್ವೀಕರಿಸಿದ ಬಳಿಕ ಈ ಪ್ರಕರಣವನ್ನು ಇತರ ಪ್ರಕರಣಗಳಂತೆ ನಿಭಾಯಿಸಲಾಗಿದೆ ಎಂದು ಕೌಶಲ್ ವಿವರಿಸಿದ್ದಾರೆ.

ಇದನ್ನೂ ಓದಿ: Udupi Lokayukta Raid; ಅಕ್ರಮ ಆಸ್ತಿ ಗಳಿಕೆ ಪ್ರಕರಣ: ವಿವಿಧೆಡೆ ಲೋಕಾಯುಕ್ತ ದಾಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next