Advertisement

ಮಹದಾಯಿ ತೀರ ವಾಸಿಗಳ ಬದುಕಿಗೆ ಆಸರೆಯಾಗಿ : ಸರ್ಕಾರಕ್ಕೆ ಆಗ್ರಹ

04:37 PM Aug 01, 2021 | Team Udayavani |

ಪಣಜಿ : ಜುಲೈ 23 ರಂದು ಧಾರಾಕಾರ ಮಳೆಗೆ ಗೋವಾದಲ್ಲಿ ಮಹದಾಯಿ ನದಿಗೆ ಮಹಾಪುರ ಬಂದು ನದಿ ದಡದಲ್ಲಿದ್ದ ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಭಾರಿ ಪ್ರಮಾಣದ ಹಾನಿಯುಂಟಾಗಿರುವುದು ಮಾತ್ರವಲ್ಲದೆಯೇ ಹಲವು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿವೆ.

Advertisement

ಇದನ್ನೂ ಓದಿ : ಫ್ರೆಂಡ್ ಶಿಪ್ ಡೇ ವಿಡಿಯೋ ಪೋಸ್ಟ್ ಮಾಡಿದ ಯುವಿ: ಧೋನಿ, ಕೊಹ್ಲಿಗಿಲ್ಲ ಜಾಗ!

ಮಹದಾಯಿ ನದಿ ತೀರದಲ್ಲಿರುವ ಸೋನಾಳೆ, ಉಜಗಾಂವ, ಖಾಂಡೆಪಾರ್ ಊರುಗಳಿಗೆ ಹೆಚ್ಚಿನ ಪರಿಣಾಮವುಂಟಾಗಿದೆ. ಈ ಭಾಗದಲ್ಲಿ ಹಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುತ್ತಿದ್ದ ಹಲವು ಬಡ ಕುಟುಂಬಳಿಗೆ ಆಸರೆ ಇಲ್ಲದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ  ವಾಳಪೈ ಭಾಗದ ಸಾಮಾಜಿಕ ಹೋರಾಟಗಾರ ದೇವೇಂದ್ರ ಗಾವಕರ್, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 2 ಲಕ್ಷ ರೂ ಆರ್ಥಿಕ ಸಹಾಯ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಈ ಸಹಾಯಧನ ತೀರಾ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಲ್ಲದೇ, ಸರ್ಕಾರವು ಮನೆ ಕಳೆದುಕೊಂಡವರಿಗೆ ಕೂಡಲೆ ಮನೆ ನಿರ್ಮಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸದ್ಯ ಸಿಮೆಂಟ್, ರೇತಿ, ಮತ್ತು ಕಟ್ಟಡ ಕಾರ್ಮಿಕರ ವೇತನ ತೀರಾ ಹೆಚ್ಚಳವಾಗಿದೆ. ಇಂತಹ ಸಂದರ್ಭದಲ್ಲಿ 2 ಲಕ್ಷ ರೂ ಆರ್ಥಿಕ ಸಹಾಯ ತೀರಾ ಕಡಿಮೆ ಎಂದು ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ : ಮೀನು, ಕೋಳಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಬೇಕು ಎಂದ ಬಿಜೆಪಿ ಸಚಿವ!

Advertisement

Udayavani is now on Telegram. Click here to join our channel and stay updated with the latest news.

Next