Advertisement

ಕೋವಿಡ್ ಸೋಂಕು ಇಳಿಕೆ ಹಿನ್ನೆಲೆ: ಪ್ರವಾಸೋದ್ಯಮದತ್ತ ಒಲವು ತೋರಿದ ಸರ್ಕಾರ

06:12 PM Aug 15, 2021 | Team Udayavani |

ಪಣಜಿ: ಕೋವಿಡ್ ಸೋಂಕು ಇಳಿಕೆಯಾಗುತ್ತಿದ್ದಂತೆಯೇ ಗೋವಾ ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಗಣಿಗಾರಿಕೆ ಆರಂಭಿಸಲು ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಗೋವಾ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೆ ನುಡಿದಿದ್ದಾರೆ.

Advertisement

75 ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ನೀಡಿರುವ ಸಂದೇಶದಲ್ಲಿ ರಾಜ್ಯಪಾಲರು- ಕಳೆದ ಒಂದು ವರ್ಷ ಕೋವಿಡ್ ಮಹಾಮಾರಿಯ ಸಂಕಷ್ಟ ಪರಿಸ್ಥಿತಿಯಲ್ಲೇ ಕಳೆದಿದ್ದೇವೆ. ಭಾರತ ದೇಶವು ಈ ಮಹಾಮಾರಿಯ ಮೊದಲ ಅಲೆಯನ್ನು ಧೈರ್ಯವಾಗಿ ಮತ್ತು ಯಶಸ್ವಿಯಾಗಿ ಎದುರಿಸಿದೆ. ಗೋವಾ ಸರ್ಕಾರವು ಕೂಡ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿದೆ ಎಂದು ರಾಜ್ಯಪಾಲರು ನುಡಿದರು.

ಇದನ್ನೂ ಓದಿ:ಕಬಕ ಗ್ರಾ.ಪಂನಲ್ಲಿ ಗ್ರಾಮ ಸ್ವರಾಜ್ಯ ರಥ ಅಡ್ಡಿ – ಮೂವರು ವಶಕ್ಕೆ

ಗೋವಾದಲ್ಲಿ ಕೋವಿಡ್ ಲಸಿಕಾ ಕಾರ್ಯ ವೇಗವಾಗಿ ನಡೆಯುತ್ತಿದೆ.  ಕೋವಿಡ್ ಎರಡೂ ಲಸಿಕೆ ಹಾಕಿಸಿಕೊಂಡವರು ಕೂಡ ಖಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಲೇ ಬೇಕು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next