Advertisement

ಗೋವಾದತ್ತ ಮುಖಮಾಡಿದ ದೇಶಿಯ ಪ್ರವಾಸಿಗರು

05:23 PM Sep 08, 2021 | Team Udayavani |

ಪಣಜಿ: ಕಳೆದ ಸುಮಾರು ಒಂದು ವಾರದಿಂದ ಗೋವಾಕ್ಕೆ ಆಗಮಿಸುವ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೋವಿಡ್ ಎರಡು ಲಸಿಕೆ ಪಡೆದುಕೊಂಡ ಪ್ರವಾಸಿಗರಿಗೆ ಗೋವಾಕ್ಕೆ ನೇರವಾಗಿ ಪ್ರವೇಶಿಸಲು ಪರವಾನಗಿ ನೀಡಲಾಗಿರುವುದರಿಂದ  ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾದತ್ತ ಮುಖಮಾಡಿದ್ದಾರೆ.

Advertisement

ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಖಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ ರಾಜ್ಯದ ಪ್ರಸಿದ್ಧ ಬೀಚ್‍ಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ.

ಇದನ್ನೂ ಓದಿ:ರೈತರ ಹಿತಕಾಪಾಡುವುದೇ ನನ್ನಉದ್ದೇಶ: ಮಾಜಿ ಶಾಸಕ ಬಾಲಕೃಷ್ಣ

ಗೋವಾದ ಕಲಂಗುಟ್, ವಾಗಾತೋರ್, ಶಿಕೇರಿ, ಮೀರಾಮಾರ, ದೋನಾಪಾವುಲ್, ಸೇರಿದಂತೆ ಹಲವು ಪ್ರಮುಖ ಬೀಚ್‍ಗಳು ಕಳೆದ ಹಲವು ದಿನಗಳ ನಂತರ ಮತ್ತೆ ಪ್ರವಾಸಿಗರಿಂದ ತುಂಬುತ್ತಿದೆ. ಆದರೆ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಯುವಲ್ಲಿ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next