ಪಣಜಿ: ಗೋವಾದಿಂದ ಮುಂಬೈಗೆ ತೆರಳಬೇಕಿದ್ದ ವಿಮಾನವನ್ನು ಹಠಾತ್ ರದ್ಧುಗೊಳಿಸಿರುವುದು ಗೋವಾ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಸ್ಥೆ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಗೋಏರ್ ವಿಮಾನವು ಗೋವಾದಿಂದ ಮುಂಬೈಗೆ ಬುಧವಾರ ಬೆಳಗಿನ ಜಾವ 2:10 ಕ್ಕೆ ಹೊರಡಬೇಕಿತ್ತು, ಆದರೆ ಕಾರಣಾಂತರಗಳಿಂದ ವಿಮಾನ ಹಾರಾಟ ರದ್ದಾದ ಬಗ್ಗೆ ಮಾಹಿತಿ ನೀಡಲಾಯಿತು. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ವಿಮಾನವನ್ನು ಕಂಪನಿ ರದ್ದುಗೊಳಿಸಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಹಲವು ವಿಡಿಯೋಗಳು ಹೊರಬಿದ್ದಿದ್ದು, ವಿಮಾನ ರದ್ದಾದ ಕಾರಣ 80 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಯಿತು.
ವೀಡಿಯೊದಲ್ಲಿ, ಪ್ರಯಾಣಿಕರು ಸಿಬ್ಬಂದಿಯೊಂದಿಗೆ ತುಂಬಾ ಮೌಖಿಕವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಮತ್ತು ಎಲ್ಲಾ ಪ್ರಯಾಣಿಕರು ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಉದ್ಯೋಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪರ್ಯಾಯ ವಿಮಾನದ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದೆ.
ಗೋವಾದಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಜಿ-8- 3 ಹಠಾತ್ ರದ್ದತಿಗೆ ಕಾರಣವನ್ನು ಏರ್ ಲೈನ್ಸ್ ನೀಡಿದೆ. ಗೋವಾದಲ್ಲಿ ಈ ವಿಮಾನ ಇಳಿಯುವಾಗ ಹಕ್ಕಿಯೊಂದು ವಿಮಾನಕ್ಕೆ ಬಡಿದು ಫ್ಯಾನ್‍ಗೆ ಹಾನಿಯಾದ ಕಾರಣ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ವಿವರಣೆ ನೀಡಿದೆ. ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಸಂಜೆ 6:30 ಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Athani constituency;ಅಥಣಿ ಏಕ್ ದಿನ್ ಕಾ ಎಂಎಲ್‌ಎ; ಹಂಗಾಮಿ ರಾಷ್ಟ್ರಪತಿ ಕೊಟ್ಟ ನಾಡಿದು