Advertisement

ಪಾಲೇಕರ್‌ ಹೇಳಿಕೆಗೆ ಭಾರೀ “ಟ್ವೀಟಾಕ್ರೋಶ’​​​​​​​

06:00 AM Jan 15, 2018 | |

ಬೆಂಗಳೂರು: ರಾಜ್ಯದ ರೈತರು, ಕನ್ನಡಿಗರು ಮತ್ತು ಸರ್ಕಾರದ ಬಗ್ಗೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗೋವಾ ಸಚಿವರು ತಮ್ಮ ಸ್ಥಾನದ ಘನತೆ ಮರೆತು ಮಾತನಾಡಿದ್ದಾರೆ. ಆ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿರುವ ಮುಖಂಡರು, ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಬಿಎಸ್‌ವೈ ಕಿಡಿ:
ಇವೆಲ್ಲದರ ನಡುವೆ ಮಹದಾಯಿ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯಸ್‌.ಯಡಿಯೂರಪ್ಪ, ಮಹದಾಯಿ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು ಎಂದಿದ್ದಾರೆ. ಅಲ್ಲದೆ, ಸೋನಿಯಾ ಗಾಂಧಿ ತಾವು ಗೋವಾದಿಂದ ಕರ್ನಾಟಕಕ್ಕೆ ಒಂದು ಹನಿ ನೀರೂ ಬಿಡುವುದಿಲ್ಲ ಎಂದು ಹೇಳಿದ್ದರ ಪರಿಣಾಮ ರೈತರು ಇಂದಿಗೂ ಪರದಾಡುತ್ತಿ¨ªಾರೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಈಗಲೂ ರೈತರಿಗೆ ನೀರು ಕೊಡುವ ಇಚ್ಛೆಯಿಲ್ಲ ಎಂದು ಕಿಡಿ ಕಾರಿದ್ದಾರೆ.

ಕನ್ನಡಿಗರ ಬಗ್ಗೆ ಗೋವಾ ನೀರಾವರಿ ಸಚಿವ ವಿನೋದ್‌ ಪಾಲೇಕರ್‌ ಹೇಳಿದ ನಿಂದನೀಯ ಮಾತುಗಳು ಖಂಡನೀಯ. ಆದರೂ ಗೋವಾದ ಜನರ ಬಗ್ಗೆ ನಾವು ಯಾವತ್ತೂ ದ್ವೇಷ ಹೊಂದಿರುವುದಿಲ್ಲ. ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರು ತರುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ.
  – ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡಿಗರ ವಿರುದ್ಧ ಗೋವಾ ನೀರಾವರಿ ಸಚಿವರ ಹೇಳಿಕೆ ತೀವ್ರ ಖಂಡನೀಯ. ಗೋವಾ ಜನರನ್ನು ಮೆಚ್ಚಿಸಲು ಕನ್ನಡಿಗರ ಅವಹೇಳನ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ  ಶೋಭೆ ತರುವುದಿಲ್ಲ.
  – ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ್‌ಸ್ವಾಮಿ

Advertisement

ಕನ್ನಡಿಗರ ಬಗ್ಗೆ ಗೋವಾ ಸಚಿವ ವಿನೋದ್‌ ಪಾಳೆÂàಕರ್‌ ಹೇಳಿಕೆ ಮೂರ್ಖತನದ್ದು. ಒಕ್ಕೂಟ ವ್ಯವಸ್ಥೆಯ ವಿರುದ್ಧ ಇರುವ ಹೇಳಿಕೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ತಮ್ಮ ಹೇಳಿಕೆಗಾಗಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು.
 - ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ಕರ್ನಾಟಕದ ಮೇಲೆ ವಿಶ್ವಾಸವಿಡಬಾರದು: ಪಾಲೇಕರ್‌
ಪಣಜಿ
: ಮಹದಾಯಿ ನದಿ ಗೋವಾದ ಜನನಿಯಾಗಿದ್ದಾಳೆ. ಇದರಿಂದಾಗಿ ಆ ನೀರನ್ನು ಕರ್ನಾಟಕಕ್ಕೆ ನೀಡಲು ನನ್ನ ವಿರೋಧವಿದೆ. ನ್ಯಾಯಾಲಯದ ಆದೇಶವನ್ನು ಮೀರಿ ಕರ್ನಾಟಕವು ಕಳಸಾ ಬಂಡೂರಿ ನಾಲೆ ನಿರ್ಮಿಸುತ್ತಿದೆ. ಇದನ್ನು ನಾನೇ ಸ್ವತಃ ಪರಿಶೀಲನೆ ನಡೆಸಿದ್ದೇನೆ. ಇದು ನ್ಯಾಯಾಲಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಾದ ಸುಕೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.6ರಿಂದ ನ್ಯಾಯಾಧಿಕರಣದಲ್ಲಿ ಮಹದಾಯಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಕರ್ನಾಟಕ ನಡೆಸಿರುವ ಈ ಎಲ್ಲ ಕೃತ್ಯಗಳನ್ನೂ ನ್ಯಾಯಾಲಯದ ಗಮನಕ್ಕೆ ತರಲಿದ್ದೇವೆ. ಕರ್ನಾಟಕ ಇಷ್ಟೊಂದು ದೊಡ್ಡ ಕಳಸಾ ಬಂಡೂರಿ ನಾಲೆಯನ್ನು ಯಾವಾಗ ನಿರ್ಮಾಣ ಮಾಡಿದೆ ಎಂಬುದೇ ಗೊತ್ತಾಗಲಿಲ್ಲ. ಗೋವಾ ಮುಖ್ಯಮಂತ್ರಿ ಪರ್ರಿಕರ್‌ ಕರ್ನಾಟಕಕ್ಕೆ ಬರೆದ ಪತ್ರವನ್ನು ಕರ್ನಾಟಕವು ದುರ್ಬಳಕೆ ಮಾಡಿಕೊಳ್ಳಬಾರದು. ಕರ್ನಾಟಕದ ಮೇಲೆ ಎಂದೂ ವಿಶ್ವಾಸವಿಡಬಾರದು. ನಾನು ಈ ಹಿಂದೆ ಹೇಳಿದ್ದ ಮಾತು ಈಗ ನಿಜವಾದಂತಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next