Advertisement

Goa; ತೆಂಗಿನ ಮರದ ಮೇಲೆ ಸಿಕ್ಕಿಬಿದ್ದ ಚಿರತೆ

04:58 PM May 14, 2023 | Team Udayavani |

ಪಣಜಿ: ಗೋವಾದ ಕುಯ್ನಾನ್ ಸಾವಯಿ ವೆರೆಮ್‍ನಲ್ಲಿ ಎತ್ತರದ ತೆಂಗಿನ ಮರದ ಮೇಲೆ ಚಿರತೆ ಸಿಕ್ಕಿಬಿದ್ದ ಘಟನೆ ರವಿವಾರ ನಡೆದಿದೆ.

Advertisement

ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು,  ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಚಿರತೆಯನ್ನು ಮರದಿಂದ ಕೆಳಕ್ಕಿಳಿಸಲು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಈ ಚಿರತೆ ಇಲ್ಲಿಗೆ ಹೇಗೆ ಬಂದಿತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಚಿರತೆ ತೆಂಗಿನ ಮರದ ಮೇಲೆ ಇರುವ ಬಗ್ಗೆ ಫೋಂಡಾ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಅಷ್ಟರಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವರು ಪರಿಸ್ಥಿತಿಯನ್ನು ಗಮನಿಸಿ  ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು.

ಚಿರತೆಯು ತುಂಬಾ ಎತ್ತರದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ಅದಲ್ಲದೆ ಚಿರತೆಯನ್ನು ಪ್ರಜ್ಞೆ ತಪ್ಪಿ ಕೆಳಗಿಳಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ವನ್ಯಜೀವಿ ವೈದ್ಯಾಧಿಕಾರಿಗಳೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಏತನ್ಮಧ್ಯೆ, ಬೋಂಡ್ಲಾ ಅಭಯಾರಣ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದೇ ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next