Advertisement

Goa: 54 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ- ಸಿನಿ ತಾರೆಯರು ಭಾಗಿ

10:12 AM Nov 23, 2023 | Team Udayavani |

ಪಣಜಿ: ಗೋವಾದಲ್ಲಿ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಸೋಮವಾರ ಬಾಂಬೋಲಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್, ಶಾಹಿದ್ ಕಪೂರ್, ಸನ್ನಿ ಡಿಯೋಲ್, ಕರಣ್ ಜೋಹರ್ ಮುಂತಾದವರು ಉಪಸ್ಥಿತರಿದ್ದರು.

Advertisement

ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಈ ವೇಳೆ ಶಾಹಿದ್ ಕಪೂರ್ ಅವರಿಗೆ ಸಣ್ಣ ಅಪಘಾತ ಸಂಭವಿಸಿದೆ. ಚಲನಚಿತ್ರೋತ್ಸವದ ಮುಖ್ಯ ಉದ್ಘಾಟನಾ ಸಮಾರಂಭದ ನಂತರ ವಿವಿಧ ಕಲಾವಿದರು ನೃತ್ಯ ಪ್ರದರ್ಶಿಸಿದರು. ಮಾಧುರಿ ದೀಕ್ಷಿತ್ ಜೊತೆಗೆ, ಶಾಹಿದ್ ಕಪೂರ್ ಕೂಡ ವಿವಿಧ ಹಾಡುಗಳಲ್ಲಿ ಹಾಡಿದರು. ಇದೇ ವೇಳೆ ಒಂದು ಹಾಡಿಗೆ ಡ್ಯಾನ್ಸ್ ಮಾಡುವಾಗ ಶಾಹಿದ್ ಸ್ಟಾಗೆ ಡ್ಯಾನ್ಸ್ ಮಾಡುತ್ತಾ ಬಂದರು. ಆ ಸಂದರ್ಭದಲ್ಲಿ ಕಾಲು ಜಾರಿ ಕುಸಿದು ಬಿದ್ಧ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next