ಪಣಜಿ: ಗೋವಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ನದಿ ಮತ್ತು ಸಮುದ್ರದಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಲಾಗಿದೆ ಎಂದು ಗೋವಾ ಸರಕಾರ ನೇಮಿಸಿರುವ ಜೀವರಕ್ಷಕ ಸಂಸ್ಥೆ ತಿಳಿಸಿದೆ.
ವಾರಾಂತ್ಯದಲ್ಲಿ ಪಲೋಲೆಮ್‌ನಲ್ಲಿ ಮೂವರನ್ನು ಮತ್ತು ಬೆನೌಲಿಮ್ ಮತ್ತು ಸಿಂಕ್ವೆರಿಮ್‌ನಲ್ಲಿ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
“ಮಾನ್ಸೂನ್ ಇನ್ನೂ ಇರುವುದರಿಂದ, ರಾಜ್ಯವು ಬಲವಾದ ಅಲೆಗಳು ಮತ್ತು ಮಳೆ ಸೇರಿದಂತೆ ಹವಾಮಾನ ಪರಿಸ್ಥಿತಿ ವೈಪರೀತ್ಯವಾಗುತ್ತಲೇ ಇದೆ. ಗೋವಾದ ಎಲ್ಲಾ ಬೀಚ್‌ಗಳಲ್ಲಿ ಈಜಲುಅವಕಾಶ ಇಲ್ಲ ಆದಾಗ್ಯೂ, ಜನರು ನೀರಿನಲ್ಲಿ ಇಳಿಯುವುದನ್ನು ಮುಂದುವರೆಸಿದ್ದಾರೆ” ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
22 ರಿಂದ 24 ವರ್ಷದೊಳಗಿನ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಗುಂಪು ಪಲೋಲೆಮ್ ನದಿಯಲ್ಲಿ (ದಕ್ಷಿಣ ಗೋವಾ) ಈಜುತ್ತಿದ್ದಾಗ ಬಲವಾದ ಪ್ರವಾಹಕ್ಕೆ ಕೊಚ್ಚಿಹೋಗಿದ್ದು ಒಟ್ಟಿಗೆ ಹಿಡಿದಿಡಲು ಸಾಧ್ಯವಾಗದೆ, ಮೂವರು ವ್ಯಕ್ತಿಗಳು ಬೇರ್ಪಟ್ಟು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದು, ಜೀವರಕ್ಷಕರು ಅವರನ್ನು ಗುರುತಿಸಿ ಅವರ ಸಹಾಯಕ್ಕೆ ಧಾವಿಸಿ ರಕ್ಷಿಸಿದರು.
ಬೆನೌಲಿಮ್ (ದಕ್ಷಿಣ ಗೋವಾ) ನಲ್ಲಿ, ಬೀಚ್‌ನಲ್ಲಿ ಸೈಕಲ್ ಸವಾರಿ ಆನಂದಿಸುತ್ತಿದ್ದ 14 ವರ್ಷದ ಬಾಲಕನೊಬ್ಬ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲಾಗಿದೆ.
ಸಿಂಕ್ವೆರಿಮ್ (ಉತ್ತರ ಗೋವಾ) ನಲ್ಲಿ, ಕುಟುಂಬದೊಂದಿಗೆ ನೀರಿನಲ್ಲಿದ್ದಾಗ ಬಲವಾದ ಅಲೆ ನಾಲ್ಕು ವರ್ಷದ ಬಾಲಕನ್ನು ಸೆಳೆದಿದ್ದು, ಕುಟುಂಬದಿಂದ ಬೇರ್ಪಟ್ಟಾಗ ಜೀವರಕ್ಷಕರು ಅವನ ಸಹಾಯಕ್ಕೆ ಧಾವಿಸಿ ರಕ್ಷಣಾ ಟ್ಯೂಬ್ ಸಹಾಯದಿಂದ ಅವನನ್ನು ಮರಳಿ ದಡಕ್ಕೆ ಕರೆತಂದಿದ್ದಾರೆ.ಬಾಲಕನಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಆತ ಆಘಾತಕ್ಕೊಳಗಾಗಿರುವುದು ಪತ್ತೆಯಾಗಿದೆ ಎಂದು ಜೀವರಕ್ಷಕ ಸಂಸ್ಥೆ ವಕ್ತಾರರು ಹೇಳಿದರು.