ಪಣಜಿ: ಗೋವಾದಲ್ಲಿ ಫೋಟೋಶೂಟ್ ಮಾಡುವ ನೆಪದಲ್ಲಿ ಕನ್ಪಾಲ್‍ನ ಸ್ಟಾರ್‍ಬಕ್ಸ್ ಕೆಫೆಯಿಂದ ಬೆಂಗಳೂರಿನ ಚಲನಚಿತ್ರ ನಿರ್ದೇಶಕರೊಬ್ಬರ ದುಬಾರಿ ಕೆಮರಾಗಳು ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕೇರಳದ ಯಾಸಿನ್ ಅಲಿಯಾಸ್ ದೇನು ನಾಯರ್ (43) ಎಂಬಾತನನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹಣಜುಣ ಹೋಟೆಲ್ ನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಸ್ಟಡಿಗೆ ನೀಡಲಾಗಿದೆ.
ಪಣಜಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಯಾಸಿನ್ ಕರ್ನಾಟಕದ ಚಲನಚಿತ್ರ ನಿರ್ದೇಶಕ ಅವಿನಾಶ್ ಬಿ.ಸಿಂಗ್ ಅವರನ್ನು ದರೋಡೆ ಮಾಡಿದ್ದು, ಫೋಟೋ ಶೂಟ್ ಹಿನ್ನೆಲೆಯಲ್ಲಿ ಕಂಪಾಲಾದ ಸ್ಟಾರ್‍ಬಕ್ಸ್ ಕೆಫೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಅಲ್ಲಿಗೆ ಅವಿನಾಶ್ ಬಿ.ಎಸ್ ರವರು ದುಬಾರಿ ಕೆಮರಾ ಇರುವ ಬ್ಯಾಗ್ ಹಿಡಿದು ಬಂದಿದ್ದರು. ಇಬ್ಬರೂ ಫೋಟೋಶೂಟ್ ಬಗ್ಗೆ ಚರ್ಚಿಸುತ್ತಿದ್ದಾಗ, ಯಾಸಿನ್ ಕೈಗೆ ಹಾಕಿಕೊಳ್ಳಲು ಅವಿನಾಶ್ ಅವರ ಚಿನ್ನದ ಸರವನ್ನು ತೆಗೆದುಕೊಂಡಿದ್ದು, ಬಳಿಕ ಅವಿನಾಶ್ ಕೆಫೆಯಿಂದ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದಾಗ ಯಾಸಿನ್ ತನ್ನ ಬ್ಯಾಗ್ ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.ಅವಿನಾಶ್ ಕೆಫೆಗೆ ಹಿಂತಿರುಗಿದಾಗ ಯಾಸಿನ್ ನಾಯರ್ ಇರಲಿಲ್ಲ. ಕೆಫೆ ಸಿಬಂದಿ ನ್ನು ವಿಚಾರಿಸಿದರೂ ಪತ್ತೆಯಾಗಲಿಲ್ಲ ಎನ್ನಲಾಗಿದೆ.
ಅವಿನಾಶ್ ಪಣಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವಿನಾಶ್ ಅವರಿಗೆ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿ ಯಾಸಿನ್ ಪರಿಚಯವಾಗಿತ್ತು. ಆ ವೇಳೆ ಅವಿನಾಶ್ ಬಳಿಯಿದ್ದ ಬೆಲೆಬಾಳುವ ಕೆಮರಾಗಳನ್ನು ಕದಿಯಲು ಯಾಸಿನ್ ಯೋಜನೆ ರೂಪಿಸಿದ್ದ. ಗೋವಾಕ್ಕೆ ಬಂದು ಅವಿನಾಶ್‍ರನ್ನು ಫೋಟೋಶೂಟ್‍ಗೆ ಆಹ್ವಾನಿಸಿದ್ದ.
ಯಾಸಿನ್ ಹಂಜುನ ಹೋಟೆಲ್ ನಲ್ಲಿ ತಂಗಿದ್ದಬಗ್ಗೆ ಪಣಜಿ ಪೊಲೀಸರಿಗೆ ಮಾಹಿತಿ ಲಭಿಸಿ ಬಂಧಿಸಲಾಗಿದ್ದು, ಆತನಿಂದ ಕಳ್ಳತನವಾಗಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾಸಿನ್ ಅಲಿಯಾಸ್ ಡೆನ್ ನಾಯರ್ ಬಗ್ಗೆ ದೂರುದಾರ ಅವಿನಾಶ್ ಗೆ ಯಾವುದೇ ಹೆಚ್ಚಿನ ಮಾಹಿತಿ ಇರಲಿಲ್ಲ. ಹೀಗಾಗಿ ಆತನ ಪತ್ತೆಗೆ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ, ರಸ್ತೆಯ ಕೆಲ ಅಂಗಡಿಗಳ ಸಿಸಿಟಿವಿ ಕೆಮರಾಗಳನ್ನು ಬಳಸಿದ್ದಾರೆ. ಕೆಫೆಯ ಮೂಲಕ ಸಾಗಿದ ಮಾರ್ಗವನ್ನು ಜಾಡು ಹಿಡಿದು ಹೊರಟು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇನ್ಸ್ ಪೆಕ್ಟರ್ ನಿಖಿಲ್ ಪಾಲೇಕರ್ ಮಾರ್ಗದರ್ಶನದಲ್ಲಿ ಪಣಜಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.