Advertisement

ಗೋವಾ ಎಫ್ ಸಿ ಐತಿಹಾಸಿಕ ದಾಖಲೆ: ಚಾಂಪಿಯನ್ಸ್‌ ಲೀಗ್‌ ಗುಂಪು ಹಂತಕ್ಕೆ ಅರ್ಹತೆ

04:21 PM Feb 21, 2020 | keerthan |

ಪಣಜಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ ಎಲ್‌) ಫ‌ುಟ್‌ಬಾಲ್‌ ಕೂಟದ ಪ್ರಮುಖ ತಂಡ, ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮಾಲಿಕತ್ವದ ಗೋವಾ ಎಫ್ ಸಿ ತಂಡವು ಎಎಫ್ ಸಿ ಚಾಂಪಿಯನ್ಸ್‌ ಲೀಗ್‌ ಫ‌ುಟ್‌ಬಾಲ್‌ ಕೂಟದ ಗುಂಪು ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

Advertisement

ಐಎಸ್‌ ಎಲ್‌ನ ಮತ್ತೂಂದು ತಂಡ ಜಮ್ಶೆಡ್ ಪುರ ಎಫ್ ಸಿ ತಂಡವನ್ನು 5-0 ಗೋಲಿನ ಅಂತರದಿಂದ ಸೋಲಿಸಿ ಅರ್ಹತೆ ಗಿಟ್ಟಿಸಿಕೊಂಡಿತು. ವಿಶೇಷವೆಂದರೆ ಈ ಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಕ್ಲಬ್‌ ತಂಡ ಎಂಬ ಹೆಗ್ಗಳಿಕೆಗೆ ಗೋವಾ ಎಫ್ ಸಿ ಪಾತ್ರವಾಗಿದೆ. ತಂಡದ ಸಾಧನೆಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಟ್ವೀಟರ್‌ ಮೂಲಕ ಶುಭಾಶಯ ತಿಳಿಸಿದ್ದಾರೆ.

ಎಎಎಫ್ ಸಿ ಕಪ್‌ ಪ್ಲೇಆಫ್: ಬೆಂಗಳೂರು ಎಫ್ಸಿಗೆ ಸೋಲು
ಮಾಲ್ಡೀವ್ಸ್‌ ನಲ್ಲಿ ನಡೆದ ಎಎಫ್ ಸಿ ಕಪ್‌ ಅರ್ಹತಾ ಸುತ್ತಿನ ಫ‌ುಟ್‌ ಬಾಲ್‌ ಪಂದ್ಯದಲ್ಲಿ ಮಾಝಿಯ ವಿರುದ್ಧ 2-1 ಗೋಲುಗಳ ಅಂತರದಿಂದ ಬೆಂಗಳೂರು ಎಫ್ಸಿ ಸೋಲುಂಡಿದೆ. ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಳೂರು ತಂಡದ ಪರ ನಿಲಿ ಪೆರ್ಡೊಮೊ (71ನೇ ನಿಮಿಷ) ಏಕೈಕ ಗೋಲು ಸಿಡಿಸಿದರು. ವಿಜೇತ ತಂಡದ ಪರ ಇಬ್ರಾಹಿಂ (64ನೇ ನಿಮಿಷ) ಹಾಗೂ ಸ್ಟೆವರ್ಟ್‌ (80ನೇ ನಿಮಿಷ) ಗೋಲು ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next