ಪಣಜಿ: ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಪ್ರವಾಸಿ ತಾಣಗಳಿಗಿಂತ ದೇಶದೊಳಗಿನ ಪ್ರವಾಸಿ ತಾಣಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಈ ಪೈಕಿ ಗೋವಾ ರಾಜ್ಯವು ಪ್ರವಾಸಿಗರ ಸರ್ವಾಧಿಕ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಓಯೊ ಟ್ರಾವೆಲೋಪೀಡಿಯಾ ಮಾಡಿರುವ ಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸರ್ವೆಯ ಅನುಸಾರ ಗೋವಾ ರಾಜ್ಯದ ನಂತರ ಮನಾಲಿ ಪ್ರಾವಾಸಿ ತಾಣವು ಭಾರತದ ಎರಡನೇಯ ಆಕರ್ಷಣೀಯ ತಾಣವಾಗಿದೆ. ಗೋವಾ ರಾಜ್ಯವು ರಜಾ ದಿನಗಳ ದೇಶೀಯ ಪ್ರವಾಸಿಗರ ಅತ್ಯಂತ ಆಕರ್ಷಣೀಯ ತಾಣವಾಗಿದೆ ಎಂದು ಸರ್ವೆಯಲ್ಲಿ ಭಾರತದ ಶೇ 61 ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.
ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಗೋವಾ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಸರ್ವೆಯಲ್ಲಿ ಹೇಳಿರುವಂತೆ ಮೂರನೇಯ ಒಂದು ಭಾಗ ಪ್ರವಾಸಿಗರು ಗೋವಾಕ್ಕೆ ಹೋಗಲು ಇಷ್ಟಪಡುತ್ತಾರೆ. ಗೋವಾದ ನಂತರದ ಸ್ಥಾನ ಮನಾಲಿ, ದುಬೈ, ಶಿಮ್ಲಾ ಮತ್ತು ಕೇರಳಕ್ಕೆ ಲಭಿಸಿದೆ. ಅಂತರಾಷ್ಟ್ರೀಯ ಸ್ಥಳಗಳಲ್ಲಿ ಭಾರತೀಯರು ಮಾಲ್ಡಿವ್ಸ, ಪ್ಯಾರಿಸ್, ಬಾಲಿ ಮತ್ತು ಸ್ವಿಡ್ಜರ್ಲೆಂಡ್ ಭೇಟಿ ನೀಡಲು ಬಯಸುತ್ತಾರೆ ಎಂದು ಓಯೊ ಹೇಳಿದೆ.
ಸಮೀಕ್ಷೆಯಲ್ಲಿ ಹೇಳಿರುವಂತೆ ಶೇ 37 ರಷ್ಟು ಜನರು ತಮ್ಮ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಶೇ 19 ರಷ್ಟು ಜನರು ತಮ್ಮ ಸ್ನೇಹಿತರೊಂದಿಗೆ ರಜಾದಿನಗಳನ್ನು ಕಳೆಯಲು ಇಷ್ಟಪಡುತ್ತಾರೆ. ಶೇ 12 ರಷ್ಟು ಜನರು ಏಕಾಂಗಿಯಾಗಿ ಪ್ರವಾಸಿ ತಾಣಗಳಿಗೆ ತೆರಳಲು ಬಯಸುತ್ತಾರೆ ಎಂದು ಸಮೀಕ್ಷಾ ವರದಿ ಹೇಳಿದೆ.