ಪಣಜಿ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋವಾ ಸರ್ಕಾರ ಜೂನ್ 7ರವರೆಗೆ ಕೋವಿಡ್ ಕರ್ಫ್ಯೂವನ್ನು ವಿಸ್ತರಿಸಿರುವುದಾಗಿ ಶನಿವಾರ(ಮೇ 29) ಘೋಷಿಸಿದೆ.
ಇದನ್ನೂ ಓದಿ:ಮದುವೆಗೆ ಲಾಕ್ ಡೌನ್ ಅಡ್ಡಿ ; ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮದುಮಗಳು.!
ಜೂನ್ 7ರ ಬೆಳಗ್ಗೆ 7ಗಂಟೆವರೆಗೆ ಕೋವಿಡ್ ಕರ್ಫ್ಯೂವನ್ನು ವಿಸ್ತರಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಈ ಆದೇಶವನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮೇ 9ರಿಂದ ಮೇ 23ರವರೆಗೆ ರಾಜ್ಯಾದ್ಯಂತ ಕೋವಿಡ್ ಕರ್ಫ್ಯೂ ಮುಂದುವರಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಮೊದಲು ಘೋಷಿಸಿದ್ದರು. ನಂತರ ಮೇ 31ರವರೆಗೆ ವಿಸ್ತರಿಸಲಾಗಿತ್ತು.
ಕಿರಾಣಿ ಅಂಗಡಿ, ತುರ್ತು ಅಗತ್ಯ ವಸ್ತುಗಳು, ಮದ್ಯದ ಅಂಗಡಿಗಳು ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಮೆಡಿಕಲ್ ಸ್ಟೋರ್ಸ್ ಮತ್ತು ರೆಸ್ಟೋರೆಂಟ್ ಗಳು ಕರ್ಫ್ಯೂ ಅವಧಿಯಲ್ಲಿ ಬೆಳೆಗ್ಗೆ 7ರಿಂದ ಸಂಜೆ 7ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.