ಪಣಜಿ: “ನಾವು ಶೇಕಡಾ 100 ರಷ್ಟು ಎಲೆಕ್ಟ್ರಿಕ್ ಬಸ್‍ಗಳನ್ನು ಪ್ರಾರಂಭಿಸಿದ್ದೇವೆ, ಅವು ಇದುವರೆಗೆ 7.4 ಮಿಲಿಯನ್ ಕಿಮೀ ಕ್ರಮಿಸಿವೆ. ಇದರಿಂದ ಇಂಗಾಲದ ಹೊರಸೂಸುವಿಕೆ ಶೇಕಡಾ 36 ರಷ್ಟು ಕಡಿಮೆಯಾಗಿದೆ. 100 ಎಲೆಕ್ಟ್ರಿಕ್ ಬಸ್‍ಗಳು ರಸ್ತೆಗಳಲ್ಲಿ ಓಡುತ್ತಿರುವಾಗ, ಇಂಗಾಲದ ಹೊರಸೂಸುವಿಕೆ ಎಷ್ಟು ಕಡಿಮೆಯಾಗುತ್ತದೆ ಎಂದು ಯೋಚಿಸಿ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು.
ಗೋವಾ ಕದಂಬ ಸಾರಿಗೆಗೆ ಇಪ್ಪತ್ತು ಹೊಸ ಎಸಿ ಎಲೆಕ್ಟ್ರಿಕ್ ಬಸ್‍ಗಳು ಸೇರ್ಪಡೆಯಾಗಿದೆ. ಎಲೆಕ್ಟ್ರಿಕ್ ಬಸ್‍ಗಳಲ್ಲಿ ವಿಕಲಚೇತನರು ಹತ್ತಲು ಮತ್ತು ಇಳಿಯಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಸ್‍ನಲ್ಲಿ ಪೊಲೀಸ್ ಸ್ಟೇಷನ್ ಸಂಪರ್ಕ ಮತ್ತು ನೈಜ ಸಮಯದ ಟೇಬಲ್ ಅನ್ನು ಸಹ ಅಳವಡಿಸಲಾಗಿದೆ. ಬಾಂಬೋಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನೂತನ ಬಸ್‍ಗಳನ್ನು ಉದ್ಘಾಟಿಸಿದರು.
“ಭವಿಷ್ಯದಲ್ಲಿ ನೀವು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವಾಗ, ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸಿ. ಸಾವಂತ್ ಮನವಿ ಮಾಡಿದರು.
ನಾಲ್ಕು ಬಸ್ ನಿಲ್ದಾಣಗಳ ಆಧುನೀಕರಣ
ವಾಸ್ಕೋ, ಮಡಗಾಂವ್, ಪಣಜಿ ಮತ್ತು ಮ್ಹಾಪ್ಸಾ ಬಸ್ ನಿಲ್ದಾಣಗಳನ್ನು ಆಧುನೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ತಿಳಿಸಿದರು. ಕದಂಬ ಕಾರ್ಪೊರೇಷನ್‍ಗೆ ಖಾಸಗಿ ಬಸ್‍ಗಳನ್ನು ಸೇರಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಾವಂತ್ ಹೇಳಿದರು. ಶೀಘ್ರದಲ್ಲೇ, ಎಂಟು ಗಂಟೆಯ ನಂತರ ಗೋವಾದಲ್ಲಿ ಸಾರ್ವಜನಿಕ ಬಸ್‍ಗಳು ಲಭ್ಯವಿರುತ್ತವೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
Related Articles
ಈ ಬಸ್‍ಗಳು ಪಣಜಿ ಸ್ಮಾರ್ಟ್ ಸಿಟಿಗಾಗಿ ಇರಲಿದೆ. ಈ ಸಂದರ್ಭದಲ್ಲಿ ಸಾರಿಗೆ ಸಚಿವ ಮಾವಿನ್ ಗುಡಿನ್ಹೊ, ಕೆಟಿಸಿಎಲ್ ಅಧ್ಯಕ್ಷ ಉಲ್ಲಾಸ್ ತುಯೇಕರ್, ಪಣಜಿ ಮೇಯರ್ ರೋಹಿತ್ ಮೊನ್ಸೆರಾಟ್, ಕೆಟಿಸಿಎಲ್ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.
ಬಸ್ಸಿನ ವಿಶೇಷತೆಗಳೇನು?
– ಅಂಗವಿಕಲರು ಹತ್ತಲು ಮತ್ತು ಇಳಿಯಲು ಸಾಧ್ಯವಾಗುತ್ತದೆ.
– ಪೊಲೀಸ್ ಠಾಣೆಯ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಸ್‍ನಲ್ಲಿ ಜೋಡಿಸಲಾಗಿದೆ.
– ಮೊಬೈಲ್ ನಲ್ಲಿ ರಿಯಲ್ ಟೈಮ್ ಬಸ್ ಮಾಹಿತಿ ಲಭ್ಯವಾಗಲಿದ್ದು, ಮೊಬೈಲ್ ಆಪ್ ಬರಲಿದೆ.
– ಟಿಕೆಟ್‍ಗಳಿಗೆ ಕ್ಯೂ ಆರ್ ಕೋಡ್ ಅನ್ನು ಪರಿಚಯಿಸಲಾಗಿದೆ.